ಸುಬ್ರಹ್ಮಣ್ಯ, ಆ 20: ಕುಕ್ಕೆ ಸುಬ್ರಹ್ಮಣ್ಯದ ಸಮೀಪದ ಕೂಜುಮಲೆ ಅಭಯಾರಣ್ಯದಲ್ಲಿ ಮಹಾಸ್ಪೋಟದೊಂದಿಗೆ ಮರಗಳು ಧರೆಗುರುಳುತ್ತಿವೆ ಎಂಬ ವದಂತಿ ಹರಡಿದ ಹಿನ್ನಲೆಯಲ್ಲಿ ನಾಗರಿಕರು ಆತಂಕಕ್ಕೆ ಒಳಗಾದ ಘಟನೆ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ತಕ್ಷಣ ಜಾಗೃತರಾದ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ವಿಪತ್ತು ಪಡೇಗಳನ್ನು ಸ್ಥಳಕ್ಕೆ ಕಳುಹಿಸಿದ್ದು, ಅಂತಹ ಯಾವುದೇ ಸ್ಪೋಟ ಸಂಭವಿಸಿಲ್ಲ. ಇಂತಹ ಸುಳ್ಳು ವಂದಂತಿಗಳಿಗೆ ಕಿವಿಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಎರಡು ದಿನಗಳ ಹಿಂದೆ ಕಡಮಕಲ್ ಎಸ್ಟೇಟ್ ಮತ್ತು ಕಲ್ಮಕಾರು ಅರಣ್ಯ ಪ್ರದೇಶದಲ್ಲಿ ವಿಪರೀತ ಮಳೆಗೆ ಗುಡ್ಡ ಕುಸಿದು, ಮರಗಳು ಬಿದ್ದಿದ್ದವು. ಈ ಘಟನೆಯ ಚಿತ್ರಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಹಾಸ್ಪೋಟ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.