ಸುಳ್ಯ, ಆ 20: ಸುಳ್ಯ ತಾಲೂಕಿನ ಗಡಿಭಾಗವಾದ ಕೊಡಗು ಜಿಲ್ಲಾ ವ್ಯಾಪ್ತಿಯ ಜೋಡುಪಾಲ ಮದನಾಡು ಗ್ರಾಮದಲ್ಲಿ ಭೂಕುಸಿತ ಮುಂದುವರಿದೆ. ಸಮಸ್ಯೆಗೊಳಗಾದ ಜನರನ್ನು ಕೊಡಗು ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆಯ,ದ.ಕ ಸಂಪಾಜೆ ಪ್ರೌಢಶಾಲೆಯ ಹಾಗೂ ಅರಂತೋಡು ತೆಕ್ಕಿಲ್ ಸಭಾಭನದಲ್ಲಿರು ಪರ್ನವಸತಿ ಕೇಂದ್ರಕ್ಕೆ ದಾಖಲು ಮಾಡಲಾಗುತ್ತಿದೆ. ಜನರೊಂದಿಗೆ ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡಲಾಗುತ್ತಿದೆ.
ನೆರೆ ನೀರು ಬಂದು ಗುಡ್ಡ ಕುಸಿತ ಉಂಟಾಗಿ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸುಳ್ಯ ಸರಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರ ಬಸಪ್ಪ ಅವರ ಹಾಗೂ ಅವರ ಮಗಳು ಮೋನಿಶ ಅವರ ಶವ ಪತ್ತೆಯಾಗಿದ್ದ ಅಂತಿಮ ಸಂಸ್ಕಾರ ನಡೆಸಲಾಗಿದೆ. ಇನ್ನು ಘಟನೆಯ ವೇಳೆ ಮನೆಯಲ್ಲಿದ್ದ ಸಂಬಂಧಿ ಮಂಜುಳಾ ಹಾಗೂ ಬಸಪ್ಪರ ಪತ್ನಿ ಗೌರಮ್ಮ ಅವರು ಇನ್ನು ಪತ್ತೆಯಾಗಿಲ್ಲ. ಅವರು ಕೂಡ ನೆರೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.