ಮಂಗಳೂರು, ಅ 2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ತಡರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ. ಅಹಮ್ಮದ್ ಬಾದ್ ನಲ್ಲಿ ನಡೆದ ಕಾರ್ಯಕ್ರಮವು ವಿಳಂಬವಾದ ಕಾರಣ ಸಂಜೆ ಆರು ಘಂಟೆಗೆ ನಿಗದಿಪಡಿಸಿದ್ದ ಆಗಮನವು ತಡರಾತ್ರಿಗೆ ಮುಂದೂಡಲ್ಪಟ್ಟಿತ್ತು. ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಾ ರನ್ನು ಸಂಸದರಾದ ನಳೀನ್ ಕುಮಾರ್ ಕಟೀಲು, , ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕರಾದ ಕೃಷ್ಣ ಜೆ.ಪಾಲೆಮಾರ್, ನಾಗರಾಜ ಶೆಟ್ಟಿ, ಶಾಸಕ ಎಸ್ ಅಂಗಾರ, ಕೇರಳ ಬಿಜೆಪಿ ನಾಯಕರಾದ ಮುರಳೀಧರನ್,ಕೃಷ್ಣದಾಸ್ ಹಾಗೂ ಸುರೇಂದ್ರನ್ ಮುಂತಾದವರು ಬರಮಾಡಿಕೊಂಡರು.
ಶಾ ಆಗಮನದ ಪ್ರಯುಕ್ತ ವಿಮಾನ ನಿಲ್ದಾಣ ಹಾಗೂ ಮಂಗಳೂರಿನ ಪ್ರಮುಖ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಂಗಳೂರು ವಿಮಾನ ನಿಲ್ದಾನದಿಂದ ನೇರವಾಗಿ ಶಾ ಕಾಸರಗೋಡಿನ ಬೇಕಲ್ ರೆಸಾರ್ಟ್ ಗೆ ತೆರಳಿದರು.
ಇಂದು ಶಾ ಅವರು ತಲಿಪರಂಬ ಸಮೀಪದ ಶ್ರೀ ರಾಜ ರಾಜೇಶ್ವರಿ ದೇವಸ್ಥಾನಕ್ಕೆ ಭೇತಿ ಕೊಟ್ಟು ಅಲ್ಲಿಂದ ಬಿಜೆಪಿ ಅಯೋಜಿಸಿರುವ ಪಾದಯಾತ್ರೆಯನ್ನು ಉದ್ಘಾಟನೆಗೆ ಪಯ್ಯನ್ನೂರಿಗೆ ತೆರಳಲಿದ್ದಾರೆ.
ಸಂಜೆ ಪುನಃ ಮಂಗಳೂರಿಗೆ ಆಗಮಿಸಲಿರುವ ಶಾ ಅವರು ನಾಳೆ ಬುಧವಾರ ಬೆಳಿಗ್ಗೆ 10 ಗಂಟೆಗೆ ನಗರದ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಬಿಜೆಪಿ ನಾಯಕರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಟಿಎಂಎ ಪೈ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದರೆ.