ಮಂಗಳೂರು, ಆ 23 (MSP): ಪೊಲೀಸ್ ಅಂಬ್ರೆಲ್ಲಾಗೆ ಬೈಕ್ ಡಿಕ್ಕಿ ಹೊಡೆದು ಪುತ್ತೂರಿನ ಯುವಕ ಮೃತಪಟ್ಟ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಕ್ ಸವಾರನಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಿವಾಸಿ ಗೆಗ್ರೊರಿ ಪಿಂಟೊ (25) ಬಂಧಿತ ಆರೋಪಿಯಾಗಿದ್ದಾನೆ.
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ಆಗ್ನೆಸ್ ಜಂಕ್ಷನ್ ನಲ್ಲಿ ಮೋಟಾರ್ ಸೈಕಲ್ ಪೊಲೀಸ್ ಅಂಬ್ರೆಲ್ಲಾಗೆ ಡಿಕ್ಕಿಯಾಗಿ ಸಹ ಸವಾರ ಮೃತಪಟ್ಟ ಘಟನೆಗೆ ಸಂಬಂಧಿಸಿ ಸವಾರ ಗೆಗ್ರೊರಿ ಪಿಂಟೊ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಇದೀಗ ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಅಗಸ್ಟ್ 20ರಂದು ಈ ಘಟನೆ ನಡೆದಿದ್ದು ಗ್ರೆಗೊರಿ ಪಿಂಟೋ ಚಲಾಯಿಸುತ್ತಿದ್ದ ಮೋಟಾರ್ ಬೈಕ್ ಪೊಲೀಸ್ ಅಂಬ್ರೆಲ್ಲಾಗೆ ಡಿಕ್ಕಿಯಾಗಿ ಸಹ ಸವಾರ ಪುತ್ತೂರಿನ ಪರ್ಲಡ್ಕ ನೂಜಿಬೈಲು ನಿವಾಸಿ ಗೋಡ್ವಿನ್ ಪಾಯ್ಸ್ ಅವರ ತಲೆಗೆ ಗಂಭೀರ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿ ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.