ಮೂಡುಬಿದಿರೆ, ಆ 23 (MSP): ದುಡ್ಡಿಗಾಗಿ ಒಡಹುಟ್ಟಿದ ಅಣ್ಣನನ್ನೇ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸರು ಮೃತನ ತಮ್ಮ ಸೇರಿದಂತೆ ಮೂವರು ಆರೋಪಿಗಳನ್ನು ಆ.21ರ ಮಂಗಳವಾರ ಬಂಧಿಸಿದ್ದಾರೆ.
ಕೊಲೆಗೀಡಾದ ಸುದರ್ಶನ ಜೈನ್
ಬಂಧಿತರನ್ನು ಹೊಸಬೆಟ್ಟು ಗ್ರಾಮದ ನಿವಾಸಿ , ಕೊಲೆಯದಾತನ ಸಹೋದರ ಸುಧೀರ್ ಜೈನ್ (26), ಹೊಕ್ಕಾಡಿಗೋಳಿಯ ಸಂದೀಪ್ ಶೆಟ್ಟಿ( 29) ಹಾಗೂ ವೇಣೂರು ಆರಂಬೋಡಿಯ ಬಾಲರಾಜ್ (23) ಬಂಧಿತ ಆರೋಪಿಗಳು. ಅರೋಪಿಗಳಿಗೆ ನ್ಯಾಯಾಲಯ ಆಗಸ್ಟ್ 27 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ ತನ್ನ ಪಾಲು ಪಡೆದುಕೊಂಡಿದ್ದ ಸುಧೀರ್ ಜೈನ್, ಸಹೋದರ ಪಾಲು ಕೂಡಾ ತನ್ನದಾಗಬೇಕು ಎಂದು ಷಡ್ಯಂತ್ರ ರಚಿಸಿ ಕೊಲೆ ಮಾಡಿದ್ದ.
ಘಟನೆಯ ವಿವರ:
ಕೊಲೆಯಾದ ಸುದರ್ಶನ ಜೈನ್ ಮೂಡಬಿದಿರೆ ಜವುಳಿ ಮಳಿಗೆಯೊಂದರ ನೌಕರನಾಗಿ ದುಡಿಯುತ್ತಿದ್ದು, ಆ. 11ರ ಶನಿವಾರ ರಾತ್ರಿ ಕೆಲಸ ಮುಗಿಸಿ ಬರುವಾಗ ತನ್ನ ತಮ್ಮನಾದ ಸುಧೀರ್ ಜೈನ್ ನ್ನು ಕರೆದುಕೊಂಡು ಹೊಸಬೆಟ್ಟಿನಲ್ಲಿರುವ ಮನೆಯತ್ತ ಬೈಕ್ನಲ್ಲಿ ತೆರಳಿದ್ದರು. ಆದರೆ ಅಣ್ಣ ಸುದರ್ಶನ ಅರ್ದದಾರಿಯಲ್ಲಿ ತನ್ನ ಜತೆ ಜಗಳವಾಡಿ ಮನೆಗೆ ಬರುವುದಿಲ್ಲ ಎಂದು ಹೋಗಿದ್ದು, ನಾಪತ್ತೆಯಾದ್ದಾನೆ ಎಂದು ನಾಟಕವಾಡಿ ತಮ್ಮ ದೂರು ದಾಖಲಿಸಿದ್ದರು. ಆದಾದ ಬಳಿಕ ಮರವೂರು ಮೇಲುಕೊಪ್ಪಳದ ಬಳಿ ಇರುವ ಅಣೆಕಟ್ಟಿನಲ್ಲಿ ಸುದರ್ಶನ ಅವರ ಶವ ಗೋಚರಿಸಿತ್ತು. ಇದೊಂದು ವ್ಯವ್ಯಸ್ಥಿತ ಕೊಲೆ ಪ್ರಕರಣವೆಂದು ಪೊಲೀಸರು ತನಿಖೆ ಪ್ರಾರಂಭಿಸಿದ್ದರು.
ಆ. 11ರ ಶನಿವಾರ ಮನೆ ಬಳಿ ನಿಂತಿದ್ದ ಕಾರೊಂದರಲ್ಲಿ ತಮ್ಮ ಸುಧೀರ್ನ ಸ್ನೇಹಿತ ಸಂದೀಪ್ ಮತ್ತಿಬ್ಬರಿದ್ದು, ಈ ಆರೋಪಿಗಳು ಸುದರ್ಶನನ್ನು ಕಿಡ್ನಾಪ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಅನಂತರ ಪುಚ್ಚಮೊಗರು ಫಲ್ಗುಣಿ ನದಿಗೆ ಎಸೆದಿದ್ದರು. ಆದಾದ ಬಳಿಕ ಮರವೂರು ಮೇಲುಕೊಪ್ಪಳದ ಬಳಿ ಇರುವ ಅಣೆಕಟ್ಟಿನಲ್ಲಿ ಶವವೊಂದು ಕಂಡುಬಂದಿದ್ದು, ಮೃತರ ತಾಯಿ ಶವವನ್ನು ಸುದರ್ಶನ ಜೈನ್ರದ್ದೇ ಎಂದು ಗುರುತಿಸಿದ್ದರು. ಮೃತರ ತಾಯಿ ಇತ್ತೀಚೆಗೆ 2.10 ಎಕ್ರೆ ಜಾಗವನ್ನು ರೂ. 27ಲಕ್ಷಕ್ಕೆ ಸೇಲ್ ಮಾಡಿದ್ದು ಇದರ ಮುಂಗಡವಾಗಿ ರೂ. 6 ಲಕ್ಷ ಕೈಸೇರಿತ್ತು. ಬಂದ ದುಡ್ಡಿನಲ್ಲಿ ರೂ. 3 ಲಕ್ಷವನ್ನು ಸುಧೀರ್ ಪಡೆದಿದ್ದರೂ ಕೂಡಾ ಸಿದ್ದಕಟ್ಟೆಯಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಹೊಂದಿರುವ ಸುಧೀರ್ ವ್ಯವಹಾರದಲ್ಲಿ ಸ್ವಲ್ಪ ನಷ್ಟ ಅನುಭವಿಸುತ್ತಿದ್ದ ಕಾರಣ ಅಣ್ಣನಲ್ಲಿದ್ದ ಉಳಿದ ರೂ. 3 ಲಕ್ಷ ಹಣಕ್ಕೂ ಸುಧೀರ್ ಪೀಡಿಸುತ್ತಿದ್ದ. ಆದರೆ ಇದನ್ನು ಕೊಡಲು ನಿರಾಕರಿಸಿದ್ದ ಅಣ್ಣ ಸುದರ್ಶನ ಜೈನ್ ನನ್ನು ತಮ್ಮ ಮುಗಿಸಲು ಹೊಂಚುಹಾಕಿದ್ದ ಎನ್ನಲಾಗಿದೆ.