ಉಡುಪಿ, ಮಾ 15(DaijiworldNews/MS):: ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆಯು ಕೇಂದ್ರ ಸರಕಾರದ ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಕರೆ ನೀಡಿದ್ದ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಉಡುಪಿ ಶಾಖೆ ಬೆಂಬಲ ವ್ಯಕ್ತಪಡಿಸಿದೆ.


ಇಂದು ಉಡುಪಿಯ ಕೆನರಾ ಬ್ಯಾಂಕ್ ಬಳಿ ಬ್ಯಾಂಕ್ ಯೂನಿಯನ್ ಗಳ ಸಂಯುಕ್ತ ವೇದಿಕೆಯ ವತಿಯಿಂದ ಬ್ರಹತ್ ಪ್ರತಿಭಟನಾ ಸಭೆ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ನೌಕರರ ಸಂಘದ ಮರಿಯೋ ಮಥಾಯಿಸ್ ಮಾತನಾಡಿ "ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಬ್ಯಾಂಕುಗಳು ಸೇವಾ ಮನೋಭವದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿವೆ. ಆದರೆ ಖಾಸಗಿ ಬ್ಯಾಂಕುಗಳು ಕೇವಲ ಲಾಭದ ಲೆಕ್ಕವನ್ನಿಟ್ಟುಕೊಂಡು ಕಾರ್ಯಚರಿಸುತ್ತವೆ. ನಾವುಗಳು ಸರಕಾರದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ್ದೆವೆ ಆದರೆ ಖಾಸಗಿ ಬ್ಯಾಂಕುಗಳು ಇದರ ಕುರಿತು ಗಮನ ಹರಿಸುವುದಿಲ್ಲ. ಇದೊಂದು ಬಡವರ ಬಂಡವಾಳವನ್ನು ಕೊಳ್ಳೆ ಹೊಡೆಯುವ ಹುನ್ನಾರ. ಸರಕಾರ್ ಬ್ಯಾಂಕುಗಳು ಬಳವಳಿಯಾಗಿ ಬಂದದ್ದಲ್ಲ, ಇದು ನಮ್ಮ ದೇಶದ ಸೊತ್ತು. ಪ್ರತೀ ಹಳ್ಳಿಯಲ್ಲಿ ಶಾಖೆಯನ್ನು ತೆರೆದು ದೇಶದ ಅಭಿವೃದ್ಧಿ ಗಾಗಿ ನಾವು ಶ್ರಮ ವಹಿಸಿದ್ದೇವೆ. ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಕೊಳ್ಳೆ ಹೊಡೆಯಲು ಪ್ರಯತ್ನ ಮಾಡುತಿದ್ದಾರೆ. ಇದು ಮುಂದುವರೆದರೆ ಸಾರ್ವಜನಿಕರು ರಸ್ತೆಗೆ ಇಳಿದು ತಮ್ಮ ಬ್ಯಾಂಕಿಗಾಗಿ ಮುಷ್ಕರ ಮಾಡುವ ದಿನ ದೂರ ಇಲ್ಲ" ಎಂದರು.
ಈ ಸಂಧರ್ಭದಲ್ಲಿ ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ AIBEA ಮುಖಂಡರಾದ ರಮೇಶ್, AIBOC ಮುಖಂಡರಾದ ಅಶೋಕ್ ಕೋಟ್ಯಾನ್, NCBE ಮುಖಂಡರಾದ ಸುಪ್ರಿಯಾ, AIBOA ಮುಖಂಡರಾದ ರವಿಶಂಕರ್, BEFI ಮುಖಂಡರಾದ ರವೀಂದ್ರ, ಕೆನರಾ ಬ್ಯಾಂಕಿನ ಮರಿಯೋ ಮಥಾಯಿಸ್, ಅವಿನಾಶ್ ಹೆಗ್ಡೆ, ಪ್ರೇಮನಾಥ್ ಪೂಜಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಗೇಶ್ ನಾಯಕ್, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, CITUನ ಬಾಲಕೃಷ್ಣ ಶೆಟ್ಟಿ . ಕೆನರಾ ಬ್ಯಾಂಕಿನ ವರದರಾಜ್, ಪ್ರವೀಣ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮನೋಜ್ ಕುಮಾರ್ ಕಲ್ಮಾಡಿ, ಹಾಗೂ ರಮೇಶ್, ಬ್ಯಾಂಕ್ ಆಫ್ ಬರೋಡದ ರಮೇಶ್, ಯೂಕೋ ಬ್ಯಾಂಕಿನ ಸೂರಜ್, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಸಂಘಟನೆಯ ಇತರ ಮುಖಂಡರುಗಳಾದ ಜಯನ್ ಮಲ್ಪೆ, ಸುರೇಖಾ ಮುಂತಾದವರು ಭಾಗವಹಿಸಿದ್ದರು. ಈ ಪ್ರತಿಭಟನಾ ಕಾರ್ಯಕ್ರಮವನ್ನು UFBU ನ ಸಂಚಾಲಕರಾದ ಹೆರಾಲ್ಡ್ ಡಿಸೋಜಾ ಅಪಾರ ಸಂಖ್ಯೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು.