ಉಡುಪಿ, ಮಾ. 15 (DaijiworldNews/HR) : ಶಿರ್ವ ಮೂಲದ ಯುವಕ ಉದ್ಯಾವರ ಪಿತ್ರೋಡಿಯ ಪಾಪನಾಶಿನಿ ಹೊಳೆಗೆ ಮುಳುಗಿ ಸಾವನಪ್ಪಿದ ಘಟನೆ ಕಾಪು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



ಮೃತಪಟ್ಟ ಯುವಕನನ್ನು ಸುಮಂತ್ (22) ಎಂದು ಗುರುತಿಸಲಾಗಿದೆ.
ತನ್ನ ಇಬ್ಬರು ಮಾವಂದಿರ ಜೊತೆಗೆ ಉದ್ಯಾವರ ಪಿತ್ರೋಡಿಯ ಪಾಪನಾಶಿನಿ ಹೊಳೆಗೆ ಇಂದು ಮಧ್ಯಾಹ್ನ ಕಪ್ಪೆ ಚಿಪ್ಪು ಹೆಕ್ಕಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನು ರಕ್ಷಣೆ ಮಾಡಲು ಹೋಗಿದ್ದ ಸಂತೋಷ್ ಕೂಡ ನೀರಲ್ಲಿ ಮುಳುಗಿ ಹೋಗುವ ಸಂದರ್ಭದಲ್ಲಿ ಅವರನ್ನು ಸ್ಥಳೀಯರಿಂದ ರಕ್ಷಣೆ ಮಾಡಿದ್ದಾರೆ.
ಯುವಕನ ಪತ್ತೆ ಕಾರ್ಯಚರಣೆ ನಡೆಯುತ್ತಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.