ಉಡುಪಿ, ಮಾ.16 (DaijiworldNews/MB) : ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಅಂಗೀಕಾರಗೊಳಿಸದೆಯೇ ತೆಂಕನಿಡಿಯೂರು ಗ್ರಾಮಪಂಚಾಯತ್ನಲ್ಲಿ ನವೀಕರಣ ಕಾರ್ಯ ಕೈಗೊಂಡ ವಿಚಾರದಲ್ಲಿ ತೆಂಕನಿಡಿಯೂರು ಗ್ರಾಮಪಂಚಾಯತ್ ಸದಸ್ಯರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಸದಸ್ಯರು ಬಿಜೆಪಿಯ ವಿರುದ್ದ ಪ್ರತಿಭಟನೆ ನಡೆಸಿದರು.










ಪ್ರಖ್ಯಾತ್ ಶೆಟ್ಟಿ ನೇತೃತ್ವದ ಕಾಂಗ್ರೆಸ್ ಸದಸ್ಯರು ಪಂಚಾಯತ್ ಅಧ್ಯಕ್ಷರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ಬಂದಿದ್ದು ಈ ಸಂದರ್ಭದಲ್ಲಿ ಮಾತುಕತೆ ಭುಗಿಲೆದ್ದದ್ದು ಇನ್ನೂ ವಾಗ್ವಾದ ಮುಂದುವರೆದಿದೆ.
ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸುವ ಪ್ರವೇಶ ದ್ವಾರವನ್ನು ತೆರವುಗೊಳಿಸಿ ಬೇರೆ ಕಡೆಯಲ್ಲಿ ಪ್ರವೇಶ ದ್ವಾರ ನಿರ್ಮಿಸುವ ವಿಚಾರದಲ್ಲಿ ಈ ವಾಗ್ವಾದವಾಗಿದೆ. ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಅಂಗೀಕಾರಗೊಳಿಸಿದೆಯೇ ಈ ನವೀಕರಣ ಕಾರ್ಯ ಆರಂಭಿಸಿರುವುದು ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ''ಸಾಮಾನ್ಯ ಕಾರ್ಯ ಸಭೆಯಲ್ಲಿ ಅಂಗೀಕರಿಸಲ್ಪಟ್ಟರು, ಇಲ್ಲದಿದ್ದರೂ ನಮಗೆ ಬಹುಮತ ಇರುವುದರಿಂದ, ಯಾವುದೇ ಹೊಸ ಕಾರ್ಯಗಳನ್ನು ಮಾಡಿಸಲು ನಮಗೆ ಅನುಮತಿ ಇದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ನಾವು ಯೋಚಿಸಿದ್ದೆವು. ಪ್ರವೇಶ ದ್ವಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದರಿಂದ ಮತ್ತು ಸಾರ್ವಜನಿಕರ ಕೋರಿಕೆಯಂತೆ ಹಾಗೂ ನಾವು ಯೋಜಿಸಿದ್ದ ಭವಿಷ್ಯದ ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ಪಂಚಾಯತ್ ಕಚೇರಿಗೆ ಪ್ರವೇಶಿಸುವಲ್ಲಿರುವ ಮುಖ್ಯ ಬಾಗಿಲನ್ನು ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಈ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಗಳನ್ನಾಗಿ ಮಾಡುವ ಯೋಜನೆ ನಮ್ಮಲ್ಲಿದೆ'' ಎಂದು ಹೇಳಿದ್ದಾರೆ.