ಉಡುಪಿ, ಮಾ.16 (DaijiworldNews/HR): "ಜಿಲ್ಲೆಯಲ್ಲಿ ಇಲ್ಲಿಯವರೆಗೆ ಲಸಿಕೆ ಹಾಕಿಸಿಕೊಂಡವರಲ್ಲಿ ಅಥವಾ ಒಮ್ಮೆ ಕೊರೊನಾ ಸೋಂಕು ಪತ್ತೆಯಾದವರಲ್ಲಿ ಮತ್ತೆ ಪಾಸಿಟಿವ್ ಆಗಿರುವುದು ಪತ್ತೆಯಾಗಿಲ್ಲ" ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.





ಅವರು ಮಾ.16 ರ ಬೆಳಗ್ಗೆ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ, "ಬಹಳಷ್ಟು ಜನರು ಲಸಿಕೆಯ ಒಂದೇ ಡೋಸ್ ಪಡೆದು ಸುಮ್ಮನಾಗಿದ್ದಾರೆ. ಕೊರೊನಾ ಲಸಿಕೆಯ ಒಂದನೇ ಡೋಸ್ ಪಡೆದು 28 ದಿನದ ಬಳಿಕ ಎರಡನೇ ಡೋಸ್ ಪಡೆಯದಿದ್ದರೆ ಲಸಿಕೆ ಹಾಕಿಸಿಕೊಂಡು ಯಾವುದೇ ಪ್ರಯೋಜನವಿಲ್ಲ" ಎಂದು ಹೇಳಿದರು.
"ಸರಕಾರದ ಆದೇಶದಂತೆ ಮುಂದಿನೆರಡು ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ಮತ್ತು ಕ್ರಿಮಿನಲ್ ಪ್ರಕರಣ ದಾಖಲಾಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ಮತ್ತು ಕ್ರಿಮಿನಲ್ ಪ್ರಕರಣ ದಾಖಲಾಸಲಾಗುವುದು, ಮಹಾರಾಷ್ಟ್ರ ಕೇರಳ ರಾಜ್ಯದಲ್ಲಿ ಈಗಾಗಲೇ ಕೇಸು ಹೆಚ್ಚಳವಾಗುತ್ತಿದೆ. ಹೆಚ್ಚಿನ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ" ಎಂದು ಹೇಳಿದ್ದಾರೆ.
ಇನ್ನು "ಅಂಗಡಿ- ಮಾಲ್ ಗಳಲ್ಲಿ ಅಂಗಡಿ ಮಾಲಕರು ಸಿಬ್ಬಂದಿಗಳು ಕೋವಿಡ್ ನಿಯಮ ಪಾಲಿಸದಿದ್ದರೆ ದಂಡ ಹಾಕುವುದಲ್ಲದೆ ಅಂಗಡಿ ಲೈಸೆನ್ಸ್ ರದ್ದು ಪಡಿಸಲಾಗುವುದು" ಎಂದಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಸುಧೀರ್ ಚಂದ್ರ ಸೂಡ ಮಾತನಾಡಿ, "ಜಿಲ್ಲೆಯಲ್ಲಿ ಒರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಬೇರೆ ರಾಜ್ಯದಿಂದ ಬಂದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದೆ" ಎಂದರು.
ಇನ್ನು "ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಮ್ಮೆ ಕೊರೊನಾ ಕಾಣಿಸಿಕೊಂಡರಿಗೆ ಮತ್ತೆ ಕಾಣಿಸಿಕೊಂದ ಘಟನೆ ನಡೆದಿಲ್ಲ" ಎಂದು ತಿಳಿಸಿದ್ದಾರೆ.