ಕಾಸರಗೋಡು, ಮಾ16 (DaijiworldNews/MS): ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಎಲ್.ಡಿ,ಎಫ್ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಞ೦ಗಾಡ್ ನ ಸಿಪಿಐ ಅಭ್ಯರ್ಥಿ ಇ.ಚಂದ್ರಶೇಖರನ್ , ಉದುಮ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸಿ. ಎಚ್ ಕುಞ೦ಬು , ತೃಕ್ಕರಿಪುರ ದ ಸಿಪಿಎಂ ಅಭ್ಯರ್ಥಿ ಎಂ. ರಾಜಗೋಪಾಲ್ ನಾಮಪತ್ರ ಸಲ್ಲಿಸಿದರು. ಚಂದ್ರಶೇಖರನ್ ಕಾಞ೦ ಗಾಡ್ ಕಂದಾಯಾಧಿಕಾರಿ ಹಾಗೂ ಕುಞ೦ಬು ಜಿಲ್ಲಾಧಿಕಾರಿ ಕಚೇರಿ ಹಾಗೂ ರಾಗೋಪಾಲ್ ನೀಲೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಮಾಜಿ ಸಂಸದ ಪಿ . ಕರುಣಾಕರನ್ , ಶಾಸಕ ಕೆ . ಕು೦ಞರಾಮನ್ , ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ . ಮಣಿಕಂಠನ್ , ಮೊಯಿದಿನ್ ಕು೦ಞ ಕಳ್ನಾಡ್ ರವರು ಕುಞ೦ಬು ಜೊತೆಗಿದ್ದರು .ಮಂಜೇಶ್ವರದ ಸಿಪಿಎಂ ಅಭ್ಯರ್ಥಿ ವಿ ವಿ. ರಮೇಶನ್ ಹಾಗೂ ಕಾಸರಗೋಡಿನ ಐ ಎನ್ ಎಲ್ ಅಭ್ಯರ್ಥಿ ಎಂ . ಎ ಲತೀಫ್ ಮಾರ್ಚ್ 18 ರಂದು ನಾಮಪತ್ರ ಸಲ್ಲಿಸುವರು . ಯು ಡಿ ಎಫ್ ಅಭ್ಯರ್ಥಿಗ ಳಾದ ಮಂಜೇಶ್ವರದ ಎ .ಕೆ . ಎಂ ಅಶ್ರಫ್, ಕಾಸರಗೋಡಿನ ಎನ್ . ಎ ನೆಲ್ಲಿಕುನ್ನು ನಾಳೆ ನಾಮಪತ್ರ ಸಲ್ಲಿಸುವರು.