ಭಟ್ಕಳ, ಅ 3: ಸಮುದ್ರ ತೀರದಲ್ಲಿ ಆಟವಾಡಲೆಂದು ತೆರಳಿದ್ದ ಬಾಲಕರಿಬ್ಬರು ಮಂಗಳವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ. ಮೃತ ದುರ್ದೈವಿಗಳನ್ನು ಗಣೇಶ ನಾಯ್ಕ(12), ವಿನಾಯಕ ನಾಯ್ಕ(14) ಎಂದು ಗುರುತಿಸಲಾಗಿದೆ.ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದ ಬಾಲಕರಿಬ್ಬರು ಸಮುದ್ರದ ತೀರಪ್ರದೇಶದಲ್ಲಿ ಆಟವಾಡಲೆಂದು ತೆರಳಿದ್ದರು. ಆದರೆ ನಿನ್ನೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಕೊಚ್ಚಿ ಹೋಗಿರಬಹುದೆಂಬ ಶಂಕೆಯಲ್ಲಿ ತಡರಾತ್ರಿಯವರೆಗೆ ಹುಡುಕಾಟ ನಡೆಸಿದರೂ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಅದೇ ಗ್ರಾಮದ ಕಡಲತೀರದಲ್ಲಿ ಶವ ಪತ್ತೆ ಯಾಗಿದ್ದಾರೆ .ಘಟನೆ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.