ಕಾಸರಗೋಡು, ಮಾ. 16 (DaijiworldNews/SM): ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಇದುವರೆಗೆ ಒಟ್ಟು 4 ನಾಮಪತ್ರಗಳು ಸಲ್ಲಿಕೆಯಾಗಿವೆ.
![](https://daijiworld.ap-south-1.linodeobjects.com/iWeb/tvdaijiworld/img_tv247/santhu-7.03.2021-electionnominatio.jpg)
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಶಾಂತ್ ಕುಮಾರ್ ಐ.ಬಿ, ಉದುಮ ಕ್ಷೇತ್ರದಿಂದ ಸಿಪಿಎಂನ ಸಿ. ಎಚ್. ಕುಞಂಬು, ಕಾಞಂಗಾಡ್ ಕ್ಷೇತ್ರದಲ್ಲಿ ಸಿಪಿಐನಿಂದ ಇ. ಚಂದ್ರಶೇಖರನ್, ತೃಕ್ಕರಿಪ್ಪುರದಿಂದ ಸಿಪಿಎಂನ ಎಂ. ರಾಜಗೋಪಾಲ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮಾರ್ಚ್ 19 ಕೊನೆಯದಿನವಾಗಿದ್ದು, 20ರಂದು ಸೂಕ್ಷ್ನ ಪರಿಶೀಲನೆ ನಡೆಯಲಿದೆ.