ಉಳ್ಳಾಲ, ಮಾ 17 (DaijiworldNews/MS): ಇಲ್ಲಿನ ನಗರಸಭೆ ಅಧ್ಯಕ್ಷರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಅವರನ್ನು ಐಸೊಲೇಷನ್ ನಲ್ಲಿ ಇರಿಸಲಾಗಿದೆ. ಆದರೆ ನಗರಸಭೆ ಕಚೇರಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅಧ್ಯಕ್ಷೆ ಯಲ್ಲಿ ಎರಡು ದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡಿತ್ತು. ಅದರಂತೆ ನಗರದ ಕೆಎಂ ಸಿ ಪರೀಕ್ಷೆ ಒಳಪಟ್ಟಿದ್ದ ಅಧ್ಯಕ್ಷೆಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಕೂಡಲೇ ಅವರನ್ನು ಐಸೊಲೇಷನ್ ನಲ್ಲಿ ಇರಿಸಲಾಗಿದೆ. ಆದರೆ ಅಧ್ಯಕ್ಷೆ ಸಂಪರ್ಕವಿದ್ದ ನಗರಸಭೆ ಕಚೇರಿಯಾಗಲಿ, ಅಲ್ಲಿನ ಸಿಬ್ಬಂದಿಯಾಗಲಿ, ಯಾರನ್ನೂ ಕ್ವಾರಂಟೈನ್ ಒಳಪಡಿಸದೇ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಈ ಕುರಿತು ಗಮನಹರಿಸಬೇಕು ಅನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.