ಬೆಳ್ತಂಗಡಿ, ಮಾ.17 (DaijiworldNews/PY): ಚಾರ್ಮಾಡಿ ಘಾಟಿಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಚಿಕ್ಕಮಗಳೂರು ಡಿಸಿ ಅನುಮತಿ ನೀಡಿದ್ದು, 18 ತಿಂಗಳ ಬಳಿಕ ಘಾಟಿಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಶುರುವಾಗಿದೆ.

ಸಾಂದರ್ಭಿಕ ಚಿತ್ರ
18 ತಿಂಗಳಿನಿಂದ ಲಘು ವಾಹನಗಳಿಗೆ ಮಾತ್ರವೇ ಅನುಮತಿ ಇತ್ತು. ಬಸ್, 6 ಚಕ್ರದ ಲಾರಿ, ಲಘು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
"ಆರು ಚಕ್ರಕ್ಕಿಂತ ಭಾರೀ ವಾಹನಗಳ ಸಂಚಾರಕ್ಕೆ ಮಾತ್ರವೇ ನಿರ್ಬಂಧ ಹೇರಲಾಗಿತ್ತು. ಸದ್ಯ ಎಲ್ಲಾ ವಾಹನಗಳು ಸಂಚರಿಸಬಹುದು" ಎಂದು ಡಿಸಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.