ಕಾಸರಗೋಡು, ಮಾ.17 (DaijiworldNews/PY): ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಬುಧವಾರ ನಾಲ್ವರು ನಾಮಪತ್ರ ಸಲ್ಲಿಸಿದ್ದು, ಇದರಿಂದ ಇದುವರೆಗೆ ಒಟ್ಟು 8 ನಾಮಪತ್ರ ಸಲ್ಲಿಕೆಯಾಗಿವೆ.



ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ.
ಕಾಸರಗೋಡು ಕ್ಷೇತ್ರದಿಂದ ಮುಸ್ಲಿಂ ಲೀಗ್ನ ಎನ್.ಎ ನೆಲ್ಲಿಕುನ್ನು, ಕಾಞಂಗಾಡ್ನಿಂದ ಬಿಜೆಪಿಯ ಬಲರಾಜ್, ಸಿಪಿಐನಿಂದ ಗೋವಿಂದನ್ ಪಳ್ಳಿಕಾಪಿಲ್, ತೃಕ್ಕರಿಪುರದಿಂದ ಬಿಜೆಪಿಯ ಶಿಬಿನ್.ಟಿ.ವಿ ನಾಮಪತ್ರ ಸಲ್ಲಿಸಿದರು.