ಮಂಗಳೂರು, ಅ 3:ಮಳೆ ಬಂದರೆ ಬೆಂಗಳೂರಿನಲ್ಲಿ ಅವರಣ ಕುಸಿದು ದಾರಿಹೋಕರ ಮೇಲೆ ಬಿದ್ದು ದಾರುಣವಾಗಿ ಸಾವನಪ್ಪಿದ ಘಟನೆಗಳು ಸಾಕಷ್ಟಿದೆ. ಇಂಥದ್ದೇ ಪ್ರಕರಣ ಮಂಗಳೂರಿನಲ್ಲೂ ನಡೆದು ವ್ಯಕ್ತಿಯೋರ್ವ ಗಾಯಗೊಂಡ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಸುಮಾರು 8.30 ಕ್ಕೆ ನಗರದ ಸೆಂಟ್ರಲ್ ಮಾರ್ಕೆಟ್ ಬೇಕರಿಯೊಂದರ ಮುಂಭಾಗದ ಲೇಡಿಗೋಷನ್ ಆಸ್ಪತ್ರೆಯ ಅವರಣ ಗೋಡೆಯು ಕುಸಿದು ಮಿನಿ ಲಾರಿ ಹಾಗೂ ಕೂಲಿ ಕಾರ್ಮಿಕ ಮುಸ್ತಾಫ ಎನ್ನುವವರ ಮೇಲೆ ಬಿದ್ದಿದೆ. ಪರಿಣಾಮ ಅವರ ಕಾಲಿಗೆ ತೀವ್ರ ಗಾಯಗಳಾಗಿದ್ದು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.