ಉಡುಪಿ, ಮಾ.18 (DaijiworldNews/HR): ಉಡುಪಿ ಜಿಲ್ಲೆಯ ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ತುಲಾಭಾರ ಸೇವೆ ಸಲ್ಲಿಸಿ ಈಗ ಸುದ್ದಿಯಲ್ಲಿದೆ.

ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ತುಲಾಭಾರ ಸೇವೆ ಮಾಡಿಸುವ ಮೂಲಕ ಹರಕೆ ಸಲ್ಲಿಸಿದ್ದು, ಈಗ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿ.
ಕೋಟದ ಅಮೃತೇಶ್ವರಿ ದೇವಾಲಯವು ಈ ಭಾಗದ ಶಕ್ತಿ ಕ್ಷೇತ್ರವಾಗಿದ್ದು, ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಇನ್ನು ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕಿನ ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬ ಹರಕೆ ಹೊತ್ತಿದ್ದು, ಸದ್ಯ ಹರಕೆ ತೀರಿಸುವ ಸಲುವಾಗಿ ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡಿದ್ದಾರೆ ಎನ್ನಲಾಗಿದೆ.