ಉಡುಪಿ, ಮಾ.19 (DaijiworldNews/HR): ಸರಕಾರವು ಕೊಲ್ಲೂರು ದೇವಸ್ಥಾನದ ಅವ್ಯವಹಾರಗಳ ಬಗ್ಗೆ ಪರೀಶೀಲನೆ ನಡೆಸುವ ಸಂಧರ್ಭದಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೂ ಅವಕಾಶ ನಿಡಬೇಕು ಎಂದು ಸಂಘದ ವಕ್ತಾರರಾದ ಗುರುಪ್ರಸಾದ್ ಗೌಡ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು "ಸರಕಾರವು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಹಾರಗಳ ಬಗ್ಗೆ ಕೂಡಲೇ ತನಿಖೆ ಮಾಡಲು ಆದೇಶ ನೀಡಿರುವುದು ಸ್ವಾಗತಾರ್ಹ. ಧಾರ್ಮಿಕ ದತ್ತಿ ಇಲಾಖೇಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಇಲಾಖೆಯ ಆಯುಕ್ತರಿಗೆ ಕೂಡಾ ನಾವು ಮನವಿ ಸಲ್ಲಿಸಿದ್ದೇವು. ನಮ್ಮ ಮನವಿಗೆ ಸ್ಪಂದಿಸಿದ ಮಂತ್ರಿಗಳು ಅಲ್ಲಿನ ಸ್ಥಿರ, ಚರಾಸ್ತಿಯ ಪರಿಶೀಲನೆ ಮತ್ತು ವ್ಯವಸ್ಥಾಪನೆಗೆ ಸಂಬಂಧಪಟ್ಟ ಸಭೇಯನ್ನು ಸರಕಾರ ಕರೆದಿದೆ. ಈ ಸಭೆಯಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಾಹಾ ಸಂಘಕ್ಕೂ ಭಾಗವಹಿಸಲು ಅವಕಾಶ ನೀಡಬೇಕು" ಎಂದರು.
ವ್ಯವಸ್ಥಾಪನೆ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ವಿಷಯ ಭಕ್ತರಿಗೆ ಅರಿವಾಗಬೇಕು. ಅಲ್ಲಿನ ನೈಜ ಸ್ಥಿತಿ ಭಕ್ತರಿಗೆ ತಿಳಿಯಬೇಕು. ಭಕ್ತರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಸುಧಾರಣೇ ಆಗಬೇಕು, ಎಲ್ಲಾ ಸರಕಾರದ ಅಧಿನದಲ್ಲಿರುವ ದೇವಸ್ಥಾನಗಳ ಸ್ತೀತಿ ಹೀಗೇಯೇ ಇದೆ ಎಂಬುವುದು ಸ್ವಷ್ಟ. ಈ ಅವ್ಯವಹಾರಗಳು ಕಡಿಮೆಯಾಗಲು ದೇವಸ್ಥಾನಗಳು ಸರಕಾರದಿಂದ ಮಯಕ್ತವಾಗಿ ಖಾಸಗೀಕರಣವಾಗಬೇಕು ಎಂಬುವುದು ನಮ್ಮ ಪ್ರಮುಖ ಹೋರಾಟ ಎಂದು ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಮಹಾಸಂಘದ ಸದಸ್ಯರಾದ ಮಧೂಸೂಧನ ಅಯಾರ್, ದಿನೇಶ್ ಎಂ.ಪಿ, ಶ್ರೀನಿವಾಸ, ಚಂದ್ರ ಮೋಗೇರ, ಸಮನ್ವಯಕಾರರಾದ ವಿಜಯ ಕುಮಾರ ಮತ್ತಿತರರು ಉಪಸ್ಥಿತರಿದ್ದರು.