ಕಡಬ, ಮಾ. 19 (DaijiworldNews/SM): ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಐದನೇ ದಿನವೂ ಮುಂದುವರೆದಿದ್ದು, ನ್ಯಾಯಕ್ಕಾಗಿ ರಕ್ತ ಚಳುವಳಿ ಆರಂಭಿಸಿದ್ದಾರೆ.


ಇಂದು ರಕ್ತ ಚಳುವಳಿ ಹೆಸರಿನಲ್ಲಿ ಮೊದಲು ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ ಅವರು ಬ್ಲೇಡ್ ಮೂಲಕ ಬೆರಳಿನ ತುದಿ ಕಟ್ ಮಾಡಿ ಆ ರಕ್ತದಲ್ಲಿ ಎಫ್ ಐಆರ್ ದಾಖಲಿಸಿ ಹಾಗೂ ನ್ಯಾಯಕೊಡಿ, ಅಧಿಕಾರಿಗಳೇ ನಮ್ಮನ್ನು ಬಲಿಕೊಡದಿರಿ ಎಂದು ಬರೆದುಕೊಂಡಿದ್ದಾರೆ.
ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಇಲ್ಲವೇ ಕೇಸು ದಾಖಲಿಸಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ ಎಂದು ಅಧಿಕಾರಿಗಳ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ನಿಲುವನ್ನು ಜಿಲ್ಲಾಡಳಿತ ನೀಡದ ಹಿನ್ನೆಲೆಯಲ್ಲಿ ಈ ಧರಣಿ ಮುಂದುವರೆದಿದೆ. ಉನ್ನತ ಅರಣ್ಯಾಧಿಕಾರಿಗಳು ಹೋರಾಟಗಾರರ ಫೋನ್ ಸ್ವೀಕರಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.