ಕಾಸರಗೋಡು, ಮಾ. 19 (DaijiworldNews/SM): ಕಾಸರಗೋಡಿನಲ್ಲಿ ನಿಧಾನಗತಿಯಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ಶುಕ್ರವಾರದಂದು ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

ಜಿಲ್ಲೆಯಲ್ಲಿ ಶುಕ್ರವಾರ 105 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದ್ರಢಪಟ್ಟಿದೆ. 147 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 1024 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. 6166 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 31189 ಮಂದಿಗೆ ಸೋಂಕು ದ್ರಢಪಟ್ಟಿದ್ದು, 29,864 ಮಂದಿ ಗುಣಮುಖರಾಗಿದ್ದಾರೆ.