ಬಂಟ್ವಾಳ, ಮಾ 20(DaijiworldNews/MS): ಕುಕ್ಕಿಪಾಡಿ ಗ್ರಾಮದ ಕುದ್ಕೋಳಿಯಲ್ಲಿ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ಕುದ್ಕೋಳಿ ನಿವಾಸಿ ಶೇಖರ ಗೌಡ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈತ ಸುಮಾರು ಎರಡು ತಿಂಗಳಿಂದ ಬಾಲಕಿಗೆ ತಿಂಡಿಯ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದ ಬಾಲಕಿಯ ಚಲನವಲನದಿಂದ ಅನುಮಾನಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.