ಮಂಗಳೂರು, ಮಾ 20(DaijiworldNews/MS):ಬಾಲಕಿಯೊಬ್ಬಳ ಮೊಬೈಲ್ ಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿದ ಆರೋಪದ ಮೇಲೆ ಇಬ್ಬರ ವಿರುದ್ದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ನ ಆಫ್ರಿದ್ ಹಾಗೂ ಮುನ್ನಾ ಎಂಬಿಬ್ಬರ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿದ್ದರು.

ಬಾಲಕಿಯ ತಂದೆಯೂ ಆಫ್ರಿದ್ ನ ಮೊಬೈಲ್ ಅಂಗಡಿಯಿಂದ ಸಿಮ್ ಖರೀದಿಸಿ ಆನ್ ಲೈನ್ ತರಗತಿಗೆ ಉಪಯೋಗಿಸಲು ನೀಡಿದ್ದರು. ಇದಕ್ಕೆ ಅಫ್ರಿದಿಯೂ ಅಶ್ಲೀಲ ಸಂದೇಶ ಹಾಗು ವಿಡಿಯೋಗಳನ್ನು ಕಳುಹಿಸಿದ್ದ. ಈ ನಡುವೆ ಮೊಬೈಲ್ ಹಾಳಾಗಿದ್ದು ಬಾಲಕಿಯ ತಂದೆರಿಪೇರಿಗೆಂದು ಆತನ ಅಂಗಡಿಗೆ ನೀಡಿದ್ದಾಗ ಆಫ್ರಿದ್ ಮೊಬೈಲ್ ನಲ್ಲಿ ಇದ್ದ ಬಾಲಕಿಯ ಫೋಟೋ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಂಡು , ಮುನ್ನ ಎಂಬಾತನ ಮೂಲಕವಾಗಿ ವೈರಲ್ ಮಾಡಿದ್ದ. ಇದೀಗ ಅವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.