ಮೂಡುಬಿದ್ರೆ, ಮಾ. 20(DaijiworldNews/HR) : ಕಾರ್ಮಿಕರೊಬ್ಬರು ನೀರಿನಲ್ಲಿ ಬಿದ್ದು ಸಾವನ್ನಪಿದ ಘಟನೆ ಪುತ್ತಿಗೆ ಗ್ರಾಮದ ಕಚಿಬೈಲ್ನಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಮೃತಪಟ್ಟ ವ್ಯಕ್ತಿಯನ್ನು ಕರುಮುಗೆರು ಮೂಲದ ಸೇಸು ಗೌಡರ ಪುತ್ರ ಪ್ರಕಾಶ್ ಗೌಡ (31) ಎಂದು ಗುರುತಿಸಲಾಗಿದೆ.
ಮೃತರು ಕಾಂಚೈಬೈಲ್ನಲ್ಲಿರುವ ಡಾ.ಪದ್ಮನಾಭ ಉಡುಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಮಧ್ಯಾಹ್ನ ಊಟದ ನಂತರ ಕೆಲಸಕ್ಕೆ ತೆರಳಿದವರು ಬಳಿಕ ವೈದ್ಯರ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು.
ಮೃತರ ಕುಟುಂಬಸ್ಥರು ಆತನನ್ನು ಹುಡುಕಲು ಪ್ರಾರಂಭಿಸಿ, ಪೊಲೀಸ್ ಠಾಣೆಯಲ್ಲಿ ಕೂಡ ಕಾಣೆಯಾದ ದೂರು ಸಲ್ಲಿಸಿದರು.
ಬಳಿಕ ಕಾಂಚಿಬೈಲ್ನ ಮದ್ಮಲ್ ಗುಂಡಿ ನೀರಿನಲ್ಲಿ ಅವರ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿದ ಮೂಡುಬಿದ್ರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.