ಬಂಟ್ವಾಳ, ಮಾ.20 (DaijiworldNews/MB) : ಜ್ಯೋತಿಷಿಯೋರ್ವರಿಗೆ ಇಬ್ಬರು ವ್ಯಕ್ತಿಗಳು ಚೂರಿ ಹಾಕಿ ಪರಾರಿಯಾದ ಘಟನೆ ಬಿಸಿರೋಡಿನ ಕಾಂಪ್ಲೆಕ್ಸ್ ಒಂದರಲ್ಲಿ ನಡೆದಿದೆ.


ಬಿಸಿರೋಡಿನ ಹೃದಯಭಾಗದಲ್ಲಿರುವ ಪದ್ಮಾ ಕಾಂಪ್ಲೆಕ್ಸನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದಲ್ಲಿ ಪಂಡಿತ್ ಲಕ್ಮೀಕಾಂತ್ ಭಟ್ ಎಂಬವರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ಮಧ್ಯಾಹ್ನದ ವೇಳೆಗೆ ಇಬ್ಬರು ವ್ಯಕ್ತಿಗಳು ವೈಯಕ್ತಿಕ ವಿಚಾರದ ಹಿನ್ನೆಲೆಯಲ್ಲಿ ಚೂರಿಯಿಂದ ಇರಿದು ಬಾಗಿಲು ಹಾಕಿ ಪರಾರಿಯಾಗಿದ್ದಾರೆ. ಪಂಡಿತ್ ಅವರು ಘಟನೆಯಿಂದ ಮೂರ್ಚೆ ಹೋಗಿದ್ದು ಎಚ್ಚರ ಬಂದ ಬಳಿಕ ಅವರೇ ಎದ್ದು ರೂಮ್ ನಿಂದ ಹೊರಬಂದಿದ್ದಾರೆ.
ರಕ್ತಸಿಕ್ತ ವಾದ ರೀತಿಯಲ್ಲಿ ಪಂಡಿತ್ ಅವರನ್ನು ಕಂಡು ಇವರ ಕೋಣೆಯ ಪಕ್ಕದ ಕೋಣೆಯವರು ನೋಡಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.