ಕುಂಬಳೆ, ಮಾ.20 (DaijiworldNews/MB) : ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ ಒಂದೂವರೆ ಕೆ.ಜಿ. ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೀ೦ಜ ಸಂತಡ್ಕದ ಅಬ್ದುಲ್ ರಹಮಾನ್ (44) ಎಂದು ಗುರುತಿಸಲಾಗಿದೆ.
ಬಂದ್ಯೋಡು ಅಡ್ಕದಿಂದ ಈತನನ್ನು ಬಂಧಿಸಲಾಗಿದೆ. ವಾಹನ ತಪಾಸಣೆ ನಡೆಸುತ್ತಿದ್ದಾಗ ಗಾಂಜಾ ಪತ್ತೆಯಾಗಿದೆ.