ಮಂಗಳೂರು, ಮಾ.20 (DaijiworldNews/MB) : ಕಲ್ಲಾಪು ಗುಜರಿ ಅಂಗಡಿಗೆ ಬೆಂಕಿ ಬಿದ್ದು ಅಪಾರ ಗುಜಿರಿ ಸೊತ್ತುಗಳು ನಾಶವಾಗಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ಬಳಿ ಸಂಭವಿಸಿದೆ.

ಸಾಂದರ್ಭಿಕ ಚಿತ್ರ
ಅರಾಫತ್ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಇಲೆಕ್ಟ್ರಿಕಲ್ ಶಾರ್ಟ್ ಸಕ್ಯೂ೯ಟ್ನಿಂದ ಬೆಂಕಿ ಬಿದ್ದಿದ್ದು, ಫ್ರಿಡ್ಜ್ನಲ್ಲಿ ಸಿಗುವ ಥರ್ಮಕೋಲ್ ನ ರಾಶಿಗೆ ಬೆಂಕಿ ತಗಲಿ ಸಂಪೂರ್ಣವಾಗಿ ನಾಶವಾಗಿದೆ. ಮಾಹಿತಿ ಪಡೆದು ಪಾಂಡೇಶ್ವರ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಿತು.