ಕಾಸರಗೋಡು, ಅ 3: ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನಕ್ಕಿಳಿದಾಗ ಇಲ್ಲಿನ ನಿವಾಸಿ ತೃಶೂರ್ ನಲ್ಲಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ. ಬದಿಯಡ್ಕ ಬಳಿಯ ಮೂಕಂಪಾರೆ ನಿವಾಸಿ ಮೊಹಮ್ಮದ್ರ ಪುತ್ರ ಅಬ್ದುಲ್ ನಾಫಿ (16) ಮೃತ ಬಾಲಕ. ಸೋಮವಾರ ಮದ್ಯಾಹ್ನ ೩ ಗಂಟೆ ವೇಳೆ ಇಬ್ಬರು ಸ್ನೇಹಿತರ ಜತೆ ಪೆರಿಂಗಾನಂ ಬಳಿಯ ಕನೋಲಿ ಸರೋವರಕ್ಕೆ ಸ್ನಾನಕ್ಕೆಂದು ಈತ ತೆರಳಿದ್ದನು, ಈಜಾಡಿ ಮನೆಗೆ ತೆರಳುವ ವೇಳೆ ಕಾಲಿಗೆ ಅಂಟಿದ ಕೆಸರನ್ನು ತೊಳೆಯಲೆಂದು ಅಬ್ದುಲ್ ನಾಫಿ ಮತ್ತೆ ಸರೋವರಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಆತ ಕೆಸರಿನಲ್ಲಿ ಹೂತು ಹೋಗಿರುವುದೇ ದುರ್ಘಟನೆಗೆ ಕಾರಣವೆನ್ನಲಾಗಿದೆ.ತೃಶೂರು ಬಳಿಯ ಮದಿಲಗಂ ಠಾಣೆ ಪೊಲೀಸರು, ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ಶೋಧ ನಡೆಸಿದಾಗ ಸಂಜೆ 7 ಗಂಟೆ ವೇಳೆ ಅಬ್ದುಲ್ ನಾಫಿಯನ್ನು ನೀರಿನಿಂದ ಮೇಲಕ್ಕೆತ್ತಿದ್ದರೂ ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.