ಅ 3: ಪ್ರಸಿದ್ದ ನಟಿ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ದಿಲೀಪ್ ಗೆ ಕೊನೆಗೂ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಬಂಧನಕ್ಕೊಳಗಾದ ಬಳಿಕ ೪ ಬಾರಿ ದಿಲೀಪ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಅವೆಲ್ಲವನ್ನೂ ಕೋರ್ಟ್ ತಿರಸ್ಕರಿಸಿತ್ತು. ಆದರೆ ೫ ನೇ ಬಾರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್ ಇದೀಗ ಬಂಧನವಾದ 86 ದಿನಗಳ ಬಳಿಕ ಷರತ್ತುಬದ್ದ ಜಾಮೀನು ನೀಡಿದೆ.
ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿರುವ ನಟಿಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತು.ಆ ನೀಚ ಕೃತ್ಯದ ಹಿಂದೆ ಮಳಿಯಾಳಂನ ಖ್ಯಾತ ನಟ ದಿಲೀಪ್ ಕೈವಾಡವಿದೆಯೆಂದು ಆತನನ್ನು ಜೂನ್ 10ರಂದು ಬಂಧಿಸಲಾಗಿತ್ತು.