ಮಂಗಳೂರು, ಆ 28(SM): ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್(ರಿ) ಮಂಗಳೂರು ಇದರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಬಜಪೆಯ ಬೀಬಿಲಚ್ಚಿಲ್ನ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ ಮಂಗಳವಾರ ನಡೆಯಿತು. ಗಿಡ ನೆಡುವ ಮೂಲಕ ವನಮಹೋತ್ಸವದ ಉದ್ಘಾಟನೆಯನ್ನು ಮಂಜುನಾಥ್ ಭಟ್ ನೆರವೇರಿಸಿದರು.
ಪರಿಸರ ಪ್ರೇಮಿ ಮಾಧವ ಉಳ್ಳಾಲ ಮಾತನಾಡಿ ದೇವಸ್ಥಾನದ ಪರಿಸರದಲ್ಲಿ ನೆಟ್ಟಂತಹ ವಿವಿಧ ಗಿಡಗಳ ಮಹತ್ವವನ್ನು ವಿವರಿಸಿದರು. ಅದರಲ್ಲೂ ಮುಖ್ಯವಾಗಿ ಔಷಧೀಯ ಗುಣಗಳ ರಕ್ತಚಂದನ, ಸಂಪಿಗೆ, ಕದಂಬ ವೃಕ್ಷ , ಬಿಲ್ವ ಪತ್ರೆ, ಬಿಟಿ, ನೇರಳೆ, ಸೊರಗೆ, ಸೀತಾ, ಅಶೋಕ ಇತ್ಯಾದಿ ಗಿಡಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೊಳಂಬೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಭಂಡಾರಿ, ಶ್ರೀ ಕ್ಷೇತ್ರದ ಧರ್ಮದರ್ಶಿ ಮೋನಪ್ಪ ಮೇಸ್ತ್ರಿ, ಮುಂಡ್ಕೂರು ಸಪಲಿಗ ಸೇವಾ ಸಂಘದ ಅಧ್ಯಕ್ಷ ದೇವಪ್ಪ ಸಪಲಿಗ, ಶಿವರಾಮ್ ಸಪಲಿಗ, ಶಿವರಾಮ್ ಸಾಲ್ಯಾನ್, ಪ್ರೇಮ್ ಸಾಲ್ಯಾನ್ ಬಿಜೈ ಹಾಗೂ ಪರಿವಾರ್ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.
ವನ ಮಹೋತ್ಸವದ ಬಳಿಕ ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನದ ವಿಶೇಷ ಪೂಜೆಯು ತಂಡದ ವತಿಯಿಂದ ನಡೆಯಿತು. ತಂಡದ ಸದಸ್ಯ ಪ್ರಮೋದ್ ಕರ್ಕೇರ ಕಾರ್ಯಕ್ರಮ ನಿರ್ವಹಿಸಿದರು.