ಕುಂದಾಪುರ, ಆ 29 (MSP): ಬೇರೆಯವರಿಗೆ ಸಹಾಯ ಮಾಡಲು ಹೋಗಿ ಕುವೈಟ್ ಜೈಲಿನಲ್ಲಿ ಬಂಧಿಯಾಗಿ ತಾನೇ ಸಂಕಷ್ಟಕ್ಕೆ ಸಿಲುಕಿದ ಘಟನೆ ಇದು. ನಾಲ್ಕು ವರ್ಷಗಳಿಂದ ಕುವೈಟ್ನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಂದಾಪುರ ತಾಲೂಕಿನ ಬಸ್ರೂರು ನಿವಾಸಿ ಶಂಕರ ಪೂಜಾರಿ (40) ತನ್ನೂರಿಗೆ 10 ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದರು. ಆದರೆ ಕುವೈಟಿಗೆ ಹಿಂತಿರುಗುವಾಗ ಸಹೋದ್ಯೋಗಿಯ ವಿನಂತಿಯಂತೆ ಉಡುಪಿಯ ವ್ಯಕ್ತಿಯೊಬ್ಬರು ನೀಡಿದ ಟ್ಯಾಬ್ಲೇಟ್ ನ ಪಾರ್ಸೆಲ್ನ್ನು ಕಂಡೊಯ್ದಿದ್ದರು ಅದನ್ನು ಕುವೈಟ್ನಲ್ಲಿ ಕೆಲಸ ಮಾಡುತ್ತಿರುವ ಅವರ ಅತ್ತೆಗೆ ತಲುಪಿಸುವಂತೆ ಶಂಕರ ಅವರಿಗೆ ಅವರ ಸಹೋದ್ಯೋಗಿ ತಿಳಿಸಿದ್ದರು.
ಆದರೆ ಕುವೈಟ್ ವಿಮಾನ ನಿಲ್ದಾಣದಲ್ಲಿ ಶಂಕರ್ ಅವರನ್ನು ತಪಾಸಣೆಗೊಳಪಡಿಸಿದಾಗ ಮಾತ್ರೆಗಳ ಪಾರ್ಸೆಲ್ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ. ಆಗ ನಿಜಾಂಶ ವಿವರಿಸಿದ ಶಂಕರ್ ತನ್ನ ಕಂಪನಿಯ ಕೆಲಸ ಮಾಡುತ್ತಿರುವ ವಿನಂತಿ ಮೇರೆಗೆ ತಂದಿರುವುದಾಗಿ ಹೇಳಿದಾಗ ಪೊಲೀಸರು ಸಹೋದ್ಯೋಗಿಯನ್ನು ಕರೆಯಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಸಂದರ್ಭ ಸಹೋದ್ಯೋಗಿ ನಮಗೂ ಪಾರ್ಸೆಲ್ಗೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿ ನನ್ನ ಪತಿಗೆ ಮೋಸಮಾಡಿದ್ದಾರೆ ಎಂದು ಶಂಕರ ಪೂಜಾರಿ ಅವರ ಜ್ಯೋತಿ ಆರೋಪಿಸಿದ್ದಾರೆ.ನನ್ನ ಗಂಡ ಯಾವುದೇ ತಪ್ಪು ಎಸಗದಿದ್ದರೂ ಕಳೆದ ಮೂರು ತಿಂಗಳಿಂದ ಕುವೈಟ್ ಜೈಲಿನಲ್ಲಿದ್ದಾರೆ. ಈ ಬಗ್ಗೆ ಸಚಿವೆ ಸುಷ್ಮಾ ಸ್ವರಾಜ್ರಿಗೆ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಅವರ ಮೂಲಕ ಮನವಿ ಕೊಡಲಾಗಿತ್ತು. ಆದರೆ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಹೇಗಾದರೂ ಮಾಡಿ ನನ್ನ ಗಂಡನನ್ನು ಜೈಲಿನಿಂದ ಬಿಡುಗಡೆಗೊಳಿಸಿವಂತೆ ನೊಂದು ಕಣ್ಣೀರುಡುತ್ತಾರೆ ಶಂಕರ್ ಪತಿ ಜ್ಯೋತಿ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿಯ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಶಂಕರ ಪೂಜಾರಿ ಅವರ ಪತ್ನಿ ಜ್ಯೋತಿ ಅವರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಎಸ್ಪಿ ಲಕ್ಷ್ಮಣ ಬ. ನಿಂಬರಗಿ, ಕುಂದಾಪುರದ ಸಹಾಯಕ ಆಯುಕ್ತ ಭೂಬಾಲನ್, ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್ ಶ್ಯಾನುಭಾಗ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಅವರ ಸಮ್ಮುಖದಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿಸಲಾಗಿದೆ.ಶಂಕರ ಅವರನ್ನು ಬಂಧಿಸಿದ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ನಾವೇ ಕುವೈಟ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತೇವೆ ಆ ಬಳಿಕ ಚಿಂತಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.