ಕಾಸರಗೋಡು, ಆ 29 (MSP): ಬೇಡಡ್ಕ ಗ್ರಾಮ ಪಂಚಾಯತ್ ನ ಸ್ಥಾಯಿ ಸಮಿತಿ ಅಧ್ಯಕ್ಷ, ಸಿಪಿಎಂ ಮುಖಂಡ ಸುಕುಮಾರನ್ ಅವರ ಮೃತದೇಹ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಗಸ್ಟ್ 28 ರ ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟವರು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಆದರೆ ಆ. 29 ರ ಬುಧವಾರ ಸುಕುಮಾರನ್ ಅವರ ಮನೆ ಸಮೀಪದ ಮರದ ರೆಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಬೇಡಡ್ಕ ಪೊಲೀಸರು ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.