ಬಂಟ್ವಾಳ, ಆ 29 (MSP): ಕೇಸರಿ ಭಗದ್ವಜವನ್ನು ಬೆಂಕಿಯಲ್ಲಿ ಸುಟ್ಟುಹಾಕಿ ಹಿಂದೂ ಧಾರ್ಮಿಕ ಮತ್ತು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಘಟಕ ಬಂಟ್ವಾಳ ಎ.ಎಸ್. ಪಿ.ಗೆ , ಹಾಗೂ ವಿ.ಹಿಂ.ಪರಿಷತ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದೆ.
ಅಗಸ್ಟ್ 28 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಅವರಣದಲ್ಲಿ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿ ಯ ವರು ಹಮ್ಮಿಕೊಂಡ ಪ್ರತಿಭಟನೆ ಯೊಂದರಲ್ಲಿ ಹಿಂದೂ ಧರ್ಮ ಹಾಗೂ ಹಿಂದೂ ಧರ್ಮದ ಕುರಿತಾಗಿ ಕೆಲಸ ಮಾಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರ ಸಂಘಟನೆಗಳ ವಿರುದ್ದ ಅವ್ಯಾಚವಾಗಿ ಕೀಳು ಮಟ್ಟದ ಭಾಷೆಯಲ್ಲಿ ಭಾಷಣ ಮಾಡಿದ್ದಲ್ಲದೆ ಹಿಂದೂಗಳು ಅತ್ಯಂತ ಶ್ರದ್ಧೆಯಿಂದ ಕಾಣುವ ಕೇಸರಿ ಭಗದ್ವಜವನ್ನು ಬೆಂಕಿಯಿಂದ ಸುಟ್ಟು ಹಾಕಿ ಧಾರ್ಮಿಕ ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಹಾಗಾಗಿ ಅದಕ್ಕೆ ಕಾರಣೀಕರ್ತರಾದ ಸಮಿತಿಯ ವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಇವರು ಠಾಣೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಯ ಪುತ್ತೂರು ಜಿಲ್ಲಾ ಅದ್ಯಕ್ಷ ರತ್ನಾಕರ ಶೆಟ್ಟಿ, ತಾಲೂಕು ಅದ್ಯಕ್ಷ ಚಂದ್ರ ಕಲಾಯಿ, ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಪುತ್ತೂರು ಜಿಲ್ಲಾ ಕಾರ್ಯದರ್ಶಿ ಬಾಲಕ್ರಷ್ಣ ಕಲಾಯಿ, ಪ್ರಮುಖರಾದ ಶೇಖರ್ ಶೆಟ್ಟಿ , ತಿಲಕ್, ಶರಣ್ ಕಾಮಾಜೆ, ಪ್ರವೀಣ್ ಅಜ್ಜಿಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು.
ಭಾರತದ ಸಂವಿಧಾನವು ನಾಗರಿಕರಿಗೆ ನೀಡಿರುವ ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯವನ್ನು ಅವಹೇಳನಕಾರಿ ರೀತಿಯಲ್ಲಿ ಉಲ್ಲಂಘಿಸಿರುವ ಈ ಕೃತ್ಯದ ಕುರಿತು ತನಿಖೆ ನಡೆಸಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ವಿ.ಹಿಂ.ಪ.ದ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣ್ಯಕುಮಾರ್, ಕಾರ್ಯದರ್ಶಿ ನವೀನ್ ನೆರಿಯ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.