ಅ 3: ಲಂಡನ್ ನಲ್ಲಿ ಮದ್ಯದ ದೊರೆ ಮಲ್ಯ ಬಂಧನವಾಗಿದೆ. ಆರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಬೇಲ್ ಪಡೆದು ಹೊರನಡೆದಿದ್ದಾರೆ. ಕಳೆದ ಆರು ತಿಂಗಳಲ್ಲಿ ವಿಜಯ್ ಮಲ್ಯರನ್ನು ಎರಡನೇ ಬಾರಿ ಲಂಡನ್ ಪೊಲೀಸರು ಬಂಧಿಸಿದ್ದು , ಎರಡೂ ಪ್ರಕರಣದಲ್ಲೂ ಕೆಲವೇ ಅವಧಿಯಲ್ಲಿ ಜಾಮೀನು ಪಡೆದಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಆರೋಪದಡಿ, ಜಾರಿ ನಿರ್ದೇಶನಾಲಯದ ದಾಖಲಿಸಿದ್ದ ಕೇಸ್ ನಂತೆ ಅರೆಸ್ಟ್ ಮಾಡಲಾಗಿದ್ದು ಮಲ್ಯ ಬಂಧನ ಲಂಡನ್ ಪೊಲೀಸರು ಖಚಿತಪಡಿಸಿದ್ದಾರೆ. ಬಂಧನವಾದ ಕೆಲವೇ ಗಂಟೆಗಳಲ್ಲಿ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.ಏ 19 ರಂದು ಬ್ಯಾಂಕ್ ಗೆ 9 ಕೋಟಿ ವಂಚಿಸಿದ ಪ್ರಕರಣದಲ್ಲೂ ಆರೆಸ್ಟ್ ಆಗಿದ್ದರು.