ಜಕಾರ್ತಾ, ಆ 29(SM): ಭಾರತದ ಅಥ್ಲೆಟಿಕ್ಸ ವಿಭಾಗಕ್ಕೆ ಈ ಬಾರಿಯ ಏಷ್ಯನ್ ಗೇಮ್ಸ್ ಇತಿಹಾಸವೆನಿಸಲಿದೆ. ಈಗಾಗಲೇ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಅತೀ ಹೆಚ್ಚಿನ ಪದಕಗಳು ಲಭಿಸಿದ್ದು, ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಬಂಗಾರದ ಪದಕ ಗೆಲ್ಲಲಿದೆ. ಆಗಸ್ಟ್ 28ರ ಬುಧವಾರ ನಡೆದ ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಒಟ್ಟು 6024 ಪಾಯಿಂಟ್ ಗಳನ್ನು ಸಂಪಾದಿಸುವುದರೊಂದಿಗೆ ಸ್ವರ್ನವನ್ನು ಬೇಟೆಯಾಡಿದ್ದಾರೆ.
ಹೆಪ್ಟಾಥ್ಲಾನ್, ಕ್ಲಿಷ್ಟಕರ ಸ್ಪರ್ಧೆಯಾಗಿದ್ದು, ಏಳು ಬಗೆಯ ವಿವಿಧ ಈವೆಂಟ್ ಗಳನ್ನೊಳಗೊಂಡಿದೆ. ಹೆಪ್ಟಾಥ್ಲಾನ್ ನಲ್ಲಿ 100 ಮೀ. ಹರ್ಡಲ್ಸ್ ಓಟ, ಹೈ ಜಂಪ್, ಶಾಟ್ ಪುಟ್, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ ಮತ್ತು 800 ಮೀಟರ್ಸ್ ಸೇರಿರುತ್ತವೆ. ಇವುಗಳ ಒಟ್ಟು ಅಂಕಗಳನ್ನು ಸೇರಿಸಿ ಪಡೆದ ಅಂಕದ ಆಧಾರದಲ್ಲಿ ವಿಜೇತರ ಆಯ್ಕೆ ನಡೆಯಲಿದೆ.