ಮಂಗಳೂರು ಅ3:ಬಿಜೆಪಿ ಕೇರಳ ಘಟಕವು ನಡೆಸುವ ಜನ ರಕ್ಷ ಯಾತ್ರೆಯಲ್ಲಿ ಪಾಳ್ಗೊಳ್ಳಲು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಇಂದು ರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ.
ರಾತ್ರಿ 11:30 ಘಂಟೆಗೆ ಪ್ರತ್ಯೇಕ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಗಿ ನೇರ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಂದು ರಾತ್ರಿ ಕಾಸರಗೋಡಿನ ಬೇಕಲ್ ರೆಸೋರ್ಟಿನಲ್ಲಿ ತಂಗಲಿರುವ ಅವರು ನಾಳೆ ಕಣ್ಣನ್ನೂರಿನಲ್ಲಿ ನಡೆಯಲಿರುವ ಬಿಜೆಪಿ ಬಹಿರಂಗ ಸಭೆಗಳಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಲಿದ್ದಾರೆ.'ಜನ ರಕ್ಷಾ ಯಾತ್ರೆ' ಕೇರಳದ ವಿವಿಧ ಭಾಗಗಳಲ್ಲಿ ಸಂಚರಿಸಿ ಅಕ್ಟೋಬರ್ 17 ರಂದು ತಿರುವನಂತಪುರಂನಲ್ಲಿ ಕೊನೆಗೊಳ್ಳಲಿದೆ.
ಮಂಗಳೂರು ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಯೋಗಿಶ್ ಭಟ್, ಬಿಜೆಪಿ ಮುಖಂಡ ಉಮಾನಾಥ್ ಕೋಟ್ಯಾನ್ ಯೋಗಿ ಆದಿತ್ಯನಾಥರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.