ಕಾಸರಗೋಡು,ಆ 30 (MSP) : ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಲ್ಲಿ ಆ.30ರ ಗುರುವಾರ ಟಿಕೆಟ್ ಬದಲು ಬಕೆಟ್ ಹಿಡಿಯಲಾಯಿತು. ಕೇರಳದಲ್ಲಿ ಉಂಟಾದ ಜಲ ಪ್ರಳಯಕ್ಕೆ ಕಾಸರಗೋಡು ಖಾಸಗಿ ಬಸ್ಸು ಮಾಲಕರು ಸಹಾಯಹಸ್ತಕ್ಕೆ ಮುಂದೆ ಬಂದಿದ್ದು, ಗುರುವಾರದ ದಿನದ ಟಿಕೆಟ್ ಕಲೆಕ್ಷನ್ , ಜೊತೆಗೆ ನೌಕರರ ವೇತನ ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ಹಸ್ತಾಂತರಿಸಲಾಗುವುದು.
ಜಿಲ್ಲೆಯಲ್ಲಿ 450 ರಷ್ಟು ಖಾಸಗಿ ಬಸ್ಸು ಗಳು ಸಂಚಾರ ನಡೆಸುತ್ತಿದ್ದು, ಈ ಬಸ್ಸುಗಳಲ್ಲಿ ಇಂದು ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗುವುದಿಲ್ಲ. ಬದಲಿಗೆ ನಿರ್ವಾಹಕ ಬಕೆಟ್ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ ಕಲೆಕ್ಷನ್ ಮೊತ್ತವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸುವರು
ಕಾಸರಗೋಡು ಹೊಸ ಬಸ್ಸು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಕಾರುಣ್ಯ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭ ಸಾರಿಗೆ ಅಧಿಕಾರಿ ಕೆ . ಅಬ್ದುಲ್ ಶುಕೂರ್ , ಡಿ ವೈ ಎಸ್ ಪಿ ಪಿ . ಸುಕುಮಾರನ್ , ಪ್ರೆಸ್ ಕ್ಲಬ್ ಅಧ್ಯಕ್ಷ ಟಿ . ಎ ಶಾಫಿ , ಸಂಘದ ಜಿಲ್ಲಾ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ತಾಲೂಕು ಅಧ್ಯಕ್ಷ ಎನ್. ಎಂ ಹಸೈನಾರ್ , ಕಾರ್ಯದರ್ಶಿ ಸಿ. ಎ ಮುಹಮ್ಮದ್ ಕು೦ಞ , ಕೋಶಾಧಿಕಾರಿ ಶಂಕರ ನಾಯ್ಕ್, ಪಿ .ಎಂ ಶ್ರೀಪತಿ , ಹುಸೈನಾರ್ , ತಾರಾನಾಥ್ , ಎನ್. ಎಂ ಮುಹಮ್ಮದ್ , ಕೆ . ಬಾಲನ್, ಇಬ್ರಾಹಿಂ , ಬಶೀರ್ , ಸಲಿಂ, ರಾಜನ್ ಹಾಗೂ ಇತರ ಬಸ್ಸು ಮಾಲಕರು ಉಪಸ್ಥಿತರಿದ್ದರು.