ಕಾಸರಗೋಡು,ಆ 30 (MSP) : 18ವರ್ಷಗಳ ಬಿಜೆಪಿ ಆಡಳಿತವನ್ನು ಹೊರಹಾಕಿದ್ದ ಯು ಡಿ ಎಫ್ - ಮೈತ್ರಿಕೂಟ ಕಾರಡ್ಕ ಗ್ರಾಮಪಂಚಾಯತ್ ನಲ್ಲಿ ಅಧಿಕಾರಕ್ಕೆ ಬಂದಿದೆ.
ಮೈತ್ರಿ ಕೂಟದ ಬೆಂಬಲದಿಂದ ಪಕ್ಷೇತರ ಸದಸ್ಯೆ ಅನಸೂಯ ರೈ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಸ್ಟ್ 30 ರ ಗುರುವಾರ ನಡೆದ ಚುನಾವಣೆಯಲ್ಲಿ 8-7 ಮತಗಳ ಅಂತರದಿಂದ ಅನಸೂಯ ರೈ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ವಿರುದ್ಧ ಎಲ್ ಡಿ ಎಫ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಗೆ ಗೆಲುವು ಲಭಿಸಿದ್ದರಿಂದ ಬಿಜೆಪಿ ಅಧಿಕಾರ ಕಳೆದು ಕೊಂಡಿತ್ತು.
15 ಸದಸ್ಯ ಬಲದಲ್ಲಿ ಬಿಜೆಪಿ ಏಳು , ಸಿಪಿಐಎಂ ಮೂರು , ಸಿಪಿಎಂ ಬೆಂಬಲಿತ ಪಕ್ಷೇತ ರ ಇಬ್ಬರು, ಮುಸ್ಲಿಂ ಲೀಗ್ ಎರಡು , ಓರ್ವ ಪಕ್ಷೇತರ ಸದಸ್ಯರನ್ನು ಹೊಂದಿದೆ. ಇಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿ .ಸ್ವಪ್ನಾ ಏಳು ಮತ್ತು , ಅನಸೂಯ ರೈ ಎಂಟು ಮತಗಳನ್ನು ಪಡೆದರು . ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಅನಸೂಯ ರೈ ಸಿಪಿಐಎಂ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು.ಕಾರಡ್ಕ ಬಳಿಕ ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತವನ್ನು ಬಿಜೆಪಿ ಕಳೆದುಕೊಂಡಿತ್ತು. ಜಿಲ್ಲೆಯ 39 ಗ್ರಾಮ ಪಂಚಾಯತ್ ಗಳಲ್ಲಿ ಮಧೂರು , ಬೆಳ್ಳೂರು ಗ್ರಾಮ ಪಂಚಾಯತ್ ನಲ್ಲಿ ಮಾತ್ರ ಬಿಜೆಪಿ ಆಡಳಿತ ಇದೆ.