ಮಂಗಳೂರು, ಆ 30: ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಇಂದು ಸದ್ದು ಗದ್ದಲಗಳ ಗೂಡಾಗಿದೆ. ಸಭೆಯಲ್ಲಿ ಹಾಲಿ ಮೇಯರ್ ಮತ್ತು ಮಾಜಿ ಮೇಯರ್ ನಡುವೆ ವಾಗ್ವಾದ ನಡೆದಿದೆ.
ಪಾಲಿಕೆ ಸಭಾಂಗಣದಲ್ಲಿ ಗುರುವಾರದಂದು ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾಗಿರುವ ಮಾಜಿ ಮೇಯರ್ ಕವಿತಾ ಸನಿಲ್ ಹಾಗೂ ಹಾಲಿ ಮೇಯರ್ ಭಾಸ್ಕರ ಮೊಯ್ಲಿ ನಡುವೆ ಮಾತಿನ ಸಮರ ನಡೆದಿದೆ. ಸಾಮಾನ್ಯ ಸಭೆಯಲ್ಲಿ ಮಾತು ಆರಂಭಿಸಿದ ಮಾಜಿ ಮೇಯರ್ ಕವಿತಾ ಸನಿಲ್, ತಮ್ಮ ವಾರ್ಡ್ ನಲ್ಲಿ ಒಂದೂವರೆ ಸೆಂಟ್ಸ್ ನಲ್ಲಿ ಕಟ್ಟಲಾಗುತ್ತಿದ್ದ ಮನೆಯೊಂದನ್ನು ಕೆಡವಿಹಾಕಲಾಗಿದೆ. ಬಡವರ ಮನೆಯನ್ನು ಕೆಡವುವ ಕೆಲಸ ಮಾಡುತ್ತಿರುವ ಪಾಲಿಕೆ, ಶ್ರೀಮಂತರ ಕಟ್ಟಡಗಳನ್ನು ನಿಮಯ ಮೀರಿದ್ದರೂ ಕೆಡವುದಿಲ್ಲ ಎಂದು ಆರೋಪಿಸಿದ್ದಾರೆ. ಈ ವೇಳೆ ಪ್ರತ್ಯುತ್ತರ ನೀಡಿದ ಮೇಯರ್ ಭಾಸ್ಕರ್ ಮೊಯ್ಲಿ, ನೀವು ಮೇಯರ್ ಆಗಿದ್ದಾಗ ಬಡವರ ಪರ ಎಷ್ಟು ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಬಳಿಕ ನಡೆದ ಚರ್ಚೆ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು.