ಮಂಗಳೂರು,ಮಾ 21(DaijiworldNews/MS): ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ನಂದಿನಿ ನದೀ ಉತ್ಸವದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಯೋಗೇಶ್ವರ್ ಮತ್ತು ಇತರ ಅತಿಥಿಗಳು ವೇದಿಕೆ ಏರುತ್ತಿದ್ದಂತೆ ಸ್ಟೇಜ್ ಕುಸಿದು ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಿಂದ ಯಾವುದೇ ಗಾಯಗಳಿಲ್ಲದೆ ಸಚಿವರು ಸಹಿತ ಅತಿಥಿಗಳು ಪಾರಾಗಿದ್ದಾರೆ.

ಸಸಿಹಿತ್ಲು ಬಳಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಎರಡು ದಿನಗಳ ಕಾಲ ಆಯೋಜಿಸಿದ್ದ ನಂದಿನಿ ನದಿ ಉತ್ಸವದ ಉದ್ಘಾಟನೆ ಶನಿವಾರ ಸಂಜೆ ನಿಗದಿಯಾಗಿತ್ತು. ಸಚಿವ ಸಿ.ಪಿ ಯೋಗೇಶ್ವರ್ ಕಾರ್ಯಕ್ರಮದ ಉದ್ಘಾಟಕರಾಗಿದ್ದುಆಗಮಿಸಿದ್ದು, ಉತ್ಸಹದ ಹಿನ್ನಲೆಯಲ್ಲ್ಲಿ ಆರತಿ ಬೆಳಗಲು ನದಿ ಪಕ್ಕದಲ್ಲೇ ಸ್ಟೇಜ್ ಹಾಕಲಾಗಿತ್ತು. ಆರತಿ ಸಮಯದಲ್ಲಿ ಸ್ಟೇಜ್ ವೇದಿಕೆ ಏರುವ ವೇಳೆ ಘಟನೆ ನಡೆದಿದೆ.
ವೇದಿಕೆ ಕುಸಿದ ಕೂಡಲೇ ಸಚಿವರ ಸಹಿತ ಅತಿಥಿಗಳು ಕೆಳಗೆ ಬಿದ್ದಿದ್ದು, ಕೆಲಕಾಲ ನೂಕು ನುಗ್ಗಲು ಉಂಟಾಯಿತು. ಹೆಚ್ಚು ಜನರು ನಿಂತಿದ್ದೆ ಕುಸಿತ ಘಟನೆಗೆ ಕಾರಣ ಎನ್ನಲಾಗಿದೆ.ಬಳಿಕ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಿ ಅತಿಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.