ಶ್ರೀನಗರ, ಆ31(SS): ಜಮ್ಮು-ಕಾಶ್ಮೀರದ ಮೊದಲ ಮುಸ್ಲಿಂ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಇರಾಮ್ ಹಬಿಬ್ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಇರಾಮ್ ಹಬಿಬ್ (30) ಖಾಸಗಿ ಏರ್ಲೈನ್ಸ್ನಲ್ಲಿ ಪೈಲೆಟ್ ಆಗಿ ಸೇರಲಿದ್ದು, ಈ ಮೂಲಕ ಜಮ್ಮು-ಕಾಶ್ಮೀರದ ಮೊದಲ ಮುಸ್ಲಿಂ ಮಹಿಳಾ ಪೈಲೆಟ್ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
ಎಳೆಯ ವಯಸ್ಸಿನಲ್ಲಿಯೇ ಇರಾಮ್ ಹಬಿಬ್ ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದರು. ಇದೀಗ ಕಂಡ ಕನಸು ನನಸಾಗಿದ್ದು, ಬರುವ ತಿಂಗಳಿನಿಂದ ಕಾರ್ಯ ನಿರ್ವಹಿಸಲಿದ್ದಾರೆ.
ಈ ಹಿಂದೆ 2016ರಲ್ಲಿ ಕಾಶ್ಮೀರ ತಾನ್ವಿ ರೈನಾ ಏರ್ ಇಂಡಿಯಾ ಪೈಲೆಟ್ ಆಗಿ ಸೇರುವ ಮೂಲಕ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಇನ್ನು 21 ವರ್ಷದ ಆಯೆಷಾ ಅಜೀಜ್ ಭಾರತದ ಕಿರಿಯ ವಿದ್ಯಾರ್ಥಿ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಇರಾಮ್ ಹಬಿಬ್ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ.