ಉಜಿರೆ, ಮಾ 21(DaijiworldNews/MS): ಎಸ್. ಡಿ. ಎಂ ಕಾಲೇಜಿನಲ್ಲಿ ಓದುತ್ತಿರುವ ಮಗಳನ್ನು ಕಾಣಲೆಂದು ದೂರದ ರಾಜ್ಯದಿಂದ ಆಸೆಹೊತ್ತು ಬಂದ ತಂದೆ ಮಗಳನ್ನು ಕಾಣುವ ಮುಂಚೆಯೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮಾ.21ರ ಭಾನುವಾರ ಬೆಳಗ್ಗೆ ಉಜಿರೆಯಲ್ಲಿ ನಡೆದಿದೆ.

ಮಗಳನ್ನು ಕಾಣಲೆಂದು ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಬಸ್ಸಿನಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬಸ್ಸಿನ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಆ ವ್ಯಕ್ತಿಯನ್ನು ಬಸ್ಸಿನಿಂದ ಇಳಿಸಿ ಉಜಿರೆಯ ಬಸ್ಟ್ಯಾಂಡಿನಲ್ಲಿ ಕೂರಿಸಿದ್ದಾರೆ ಆದರೆ ಆ ವ್ಯಕ್ತಿ ಹಾಗೆಯೇ ಮಲಗಿಬಿಟ್ಟಿದ್ದಾರೆ.
ಮೂಲತಃ ಹರ್ಯಾಣ ಮೂಲದ ಈ ವ್ಯಕ್ತಿಯ ಮಗಳು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಇಲ್ಲಿ ಹಾಸ್ಟೆಲಿನಲ್ಲಿ ಮಗಳು ವಾಸ್ತವ್ಯ ಇರುವ ಕಾರಣ, ಮಗಳನ್ನು ನೋಡಿಕೊಂಡು ಬರಲು ಅಪ್ಪ ಹರ್ಯಾಣದಿಂದ ಆಗಮಿಸಿದ್ದಾರೆ. ಮಗಳನ್ನು ಭೇಟಿಯಾಗಿ ವಾಪಸ್ಸು ಹೊರಡುವಾಗ ವಿಧಿ ಬೇರೆಯದೇ ಆಟ ತೋರಿದೆ.
ಬಸ್ಸಿನಲ್ಲಿ ಇರುವವರು ಮತ್ತು ಸಿಬ್ಬಂದಿ ಸ್ವಲ್ಪ ಮುಂಜಾಗ್ರತೆ ತೆಗೆದುಕೊಂಡಿದ್ದರೆ ಬಹುಶಃ ಒಂದು ಜೀವವನ್ನು ಉಳಿಸಬಹುದಿತ್ತೇನೋ? ಇದ್ಯಾವುದನ್ನೂ ಮಾಡದೆ ಮಾನವೀಯತೆ ಮರೆತ ಕಾರಣಕ್ಕಾಗಿ ವ್ಯಕ್ತಿಯು ಬಸ್ ಸ್ಟಾಂಡ್ ನಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.