ಕಾಸರಗೋಡು, ಮಾ. 21 (DaijiworldNews/SM): ಜಿಲ್ಲೆಯಲ್ಲಿ ಆದಿತ್ಯವಾರ 79 ಮಂದಿಗೆ ಕೋವಿಡ್ ಪಾಸಿಟಿವ್ ದ್ರಢಪಟ್ಟಿದ್ದು , 82 ಮಂದಿ ಗುಣಮುಖರಾಗಿದ್ದಾರೆ.

ರವಿವಾರದಂದು 1028 ಮಂದಿ ಗುಣಮುಖರಾಗಿದ್ದಾರೆ. 6166 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 31387 ಮಂದಿಗೆ ಸೋಂಕು ದ್ರಢಪಟ್ಟಿದ್ದು, 30057 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ ಹಾಗೂ ಶನಿವಾರಕ್ಕೆ ಹೋಲಿಸಿದ್ದಲ್ಲಿ ರವಿವಾರ ಸೋಂಕಿತರ ಸಂಖ್ಯೆ ಅಲ್ಪ ಕಡಿಮೆಯಾಗಿದೆ.