ಮಂಗಳೂರು, ಅ 3 : ತೀವ್ರ ಅನಾರೋಗ್ಯಕ್ಕೊಳಗಾಗಿ ಐದು ದಿನಗಳ ಕಾಲ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಕ್ಷಗಾನದ ಮೇರು ಕಲಾವಿದ , ಪದ್ಮಶ್ರೀ ಪುರಸ್ಕೃತ ರಾಮಚಂದ್ರ ಹೆಗಡೆ (84) ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. ಚಿಟ್ಟಾಣಿಯವರ ಅಂತ್ಯಸಂಸ್ಕಾರ ಹೊನ್ನವಾರದ ಗುಡೇಕೇರಿಯಲ್ಲಿ ನೆರೆವೇರಲಿದೆ ಎಂದು ಚಿಟ್ಟಾನಿಯವರ ಪುತ್ರ ನರಸಿಂಹ ಹೆಗಡೆ ತಿಳಿಸಿದ್ದಾರೆ. ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟವರು ಚಿಟ್ಟಾಣಿಯವರು ಕೌರವ, ಕೀಚಕ ಮುಂತಾದ ಪಾತ್ರದಲ್ಲಿ ಮಿಂಚುತ್ತಿದ್ದ ಕಲಾವಿದ. 1933ರ ಜ 1 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಚಿಟ್ಟಾಣಿ ತಮ್ಮ ಇಳಿವಯಸ್ಸಿನಲ್ಲಿಯೂ ಯುವೋತ್ಸಾಹದಿಂದಲೇ ಕುಣಿಯುತ್ತಿದ್ದರು. ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿಯನ್ನು ಕಳೆದುಕೊಂಡ ಯಕ್ಷಗಾನ ಕ್ಷೇತ್ರ ಇಂದು ಬರಡಾದಂತಾಗಿದೆ.