ಬಂಟ್ವಾಳ, ಆ 31(SM): ತವರು ಮನೆಯಿಂದ ಮಗುವಿನೊಂದಿಗೆ ಚಿಕ್ಕಮಗಳೂರಿನಲ್ಲಿರುವ ತನ್ನ ಗಂಡನ ಮನೆಗೆ ತೆರಳುವುದಾಗಿ ಹೊರಟಿದ್ದ ಮಹಿಳೆಯೊರ್ವರು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮೊಡಂಕಾಪು ಗಾಂದೋಡಿ ಪರಾರಿ ನಿವಾಸಿ ಮಮತಾ (26) ಕಾಣೆಯಾದ ಮಹಿಳೆ. ಮಮತಾ ಚಿಕ್ಕಮಗಳೂರಿನಲ್ಲಿರುವ ತನ್ನ ಗಂಡನ ಮನೆಯಿಂದ ಬಂಟ್ವಾಳದ ಪರಾರಿಯಲ್ಲಿರುವ ತನ್ನ ತವರು ಮನೆಯಲ್ಲಿದ್ದ ಮಗಳನ್ನು ನೊಡಲು ಬಂದಿದ್ದರು. ಬಳಿಕ ಮಗಳ ಜೊತೆಯಲ್ಲಿ ಚಿಕ್ಕಮಗಳೂರಿನ ಗಂಡನ ಮನೆಗೆ ಹೊರಟಿದ್ದಾರೆ. ಬಿ.ಸಿ.ರೋಡಿನಿಂದ ಮಮತ ಅವರನ್ನು ತಂದೆ ಕೃಷ್ಣ ಆಚಾರ್ಯ ಬಸ್ಸಿನಲ್ಲಿ ಕುಳ್ಳಿರಿಸಿದ್ದಾರೆ. ಆದರೆ ಆಕೆ ಐದು ವರ್ಷದ ಮಗಳನ್ನು ವಾಪಾಸು ರಿಕ್ಷಾದಲ್ಲಿ ತಂದೆಯ ಮನೆಗೆ ಕಳುಹಿಸಿ ಅತ್ತ ಗಂಡನ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆಕೆಯ ತಂದೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.