ಕಾಸರಗೋಡು, ಆ 31(SM): ಕರ್ತವ್ಯಲೋಪ ಆರೋಪದಲ್ಲಿ ಅಮಾನತುಗೊಂಡ ಮುಳಿಯಾರು ಗ್ರಾಮಾಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಗಸ್ಟ್ 31ರ ಶುಕ್ರವಾರ ರಾತ್ರಿ ನಡೆದಿದೆ. ಮುಳಿಯಾರು ಗ್ರಾಮಾಧಿಕಾರಿ ಎ. ಬಿಂದು(40) ಆತ್ಮಹತ್ಯೆಗೆತ್ನಿಸಿದವರು. ಅಮಾನತು ಆದೇಶದ ಸುದ್ದಿ ತಿಳಿದ ಬಿಂದು ಕೈ ನರ ತುಂಡರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ತವ್ಯಲೋಪ ಎಸಗಿದ್ದ ಹಿನ್ನೆಲೆಯಲ್ಲಿ ಗ್ರಾಮಾಧಿಕಾರಿ ಎ. ಬಿಂದುರನ್ನು ಕೆಲಸದಿಂದ ಅಮಾನತು ಗೊಳಿಸಿ ಜಿಲ್ಲಾಧಿಕಾರಿ ಡಾ . ಸಜಿತ್ ಬಾಬು ಆದೇಶ ಹೊರಡಿಸಿದ್ದರು. ಕರ್ತವ್ಯಕ್ಕೆ ಸಮರ್ಕವಾಗಿ ಹಾಜರಾಗದೆ ಇರುವುದು, ಜನಸಾಮಾನ್ಯರಿಗೆ ಲಭಿಸಬೇಕಾದ ಸವಲತ್ತುಗಳ ವಿಳಂಬ, ಭೂ ತೆರಿಗೆ ವಸೂಲಿಯಲ್ಲಿ ನಿರ್ಲಕ್ಷ್ಯ ಪತ್ತೆಯಾದುದರಿಂದ ಬಿಂದುರನ್ನು ಅಮಾನತು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗ್ರಾಮಾಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳನ್ನು ಜನಸಾಮಾನ್ಯರು ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಈ ಹಿನ್ನೆಲೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳಿಗೆ ನೈಜತೆ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಇನ್ನು ಅಮಾನತ್ತು ಆದೇಶ ಬರುತ್ತಿದ್ದಂತೆ ನೊಂದ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.