ನವದೆಹಲಿ, ಸೆ01(SS): ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸತತ 6 ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಆದರೆ ಮುಂದಿನ ವಾರ ಬ್ಯಾಂಕ್ ಕಾರ್ಯಾಚರಿಸಲಿವೆ. ಈ ಕುರಿತು ಹರಡಿರುವ ವಂದತಿಗಳಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಧಿಕೃತ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್ಗಳಿಗೆ ಕೇವಲ 2 ದಿನ ಮಾತ್ರ ರಜೆ ಇರಲಿದೆ. ಸೆ 2ರಂದು ಭಾನುವಾರವಾಗಿದ್ದು, ಎಂದಿನಂತೆ ಎಲ್ಲಾ ಬ್ಯಾಂಕ್ಗಳಿಗೂ ರಜೆ ಇರುತ್ತದೆ. ಸೆ. 8ಕ್ಕೆ ಎರಡನೇ ಶನಿವಾರ ಎಂದಿನಂತೆ ಬ್ಯಾಂಕ್ಗಳಿಗೆ ರಜೆ ಇರಲಿದೆ. ಅಂದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್ಗಳಿಗೆ ಕೇವಲ 2 ದಿನ ರಜೆ ಇದ್ದು, ಅದೂ ಕೂಡ ಸತತವಾಗಿ ಇರದೇ ಸೆ. 2 ಮತ್ತು ಸೆ. 8 ಮಾತ್ರ ರಜೆ ಇರಲಿದೆ.
ಸೆ. 3 ರಂದು ಜನ್ಮಾಷ್ಟಮಿಗೆ ಕರ್ನಾಟಕದ ಬ್ಯಾಂಕ್ಗಳಿಗೆ ರಜೆ ಇರುವುದಿಲ್ಲ ಎಂದು ಸ್ಪಷ್ಟನೆ ಕೊಡಲಾಗಿದೆ. ಮಾತ್ರವಲ್ಲ, ಸೆ. 4 ಮತ್ತು 5 ರಂದು ಆರ್ಬಿಐ ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಲಿದ್ದು, ಆ ಎರಡು ದಿನ ದೇಶದ ಎಲ್ಲಾ ಬ್ಯಾಂಕ್ಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಆಂತರಿಕ ಕೆಲಸ ಕಾರ್ಯಗಳ ಮೇಲೆ ಒತ್ತಡ ಬೀಳುವುದರಿಂದ ಆ ಎರಡು ದಿನ ರಜೆ ಘೋಷಣೆ ಮಾಡದಿರಲು ನಿರ್ಧರಿಸಲಾಗಿದೆ.