ಮಂಗಳೂರು, ಅ 4 : ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೂರಿಂಜೆ ಬಳಿ ನಡೆದಿದೆ. ಮೃತರನ್ನು ಕೃಷ್ಣಾಪುರದ ಮಕ್ಸೂದ್ ಎಂದು ಗುರುತಿಸಲಾಗಿದೆ. ಇವರು ಎಂಆರ್ ಪಿಎಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸೂರಿಂಜೆ ,ಶಿಬರೂರು ದೇವಸ್ಥಾನದ ಕೆರೆಯ ಬಳಿ ತಂಡವೊಂದು ನಿನ್ನೆ ರಾತ್ರಿ ಸುಳಿದಾಡುತ್ತಿದ್ದು ಅದರಲ್ಲಿ ಮಕ್ಸೂದ್ ಕೂಡಾ ಇದ್ದ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಆ ತಂಡ ಮರಳಿದ್ದು ಮಕ್ಸೂದ್ ಮಾತ್ರ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಹೀಗಾಗಿ ಕೊಲೆಯ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.