ಮಂಗಳೂರು, ಸೆ01(SS): ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಕರಾವಳಿ ಕನ್ನಡತಿ ಎಂ. ಆರ್. ಪೂವಮ್ಮ ಒಳಗೊಂಡ ಭಾರತ ತಂಡ ಸ್ವರ್ಣ ಗೆಲ್ಲುವುದರೊಂದಿಗೆ ಅಪ್ರತಿಮ ಸಾಧನೆ ಮಾಡಿದ್ದರು.
ಏಷಿಯನ್ ಗೇಮ್ಸ್ನ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಗೆದ್ದಿರುವ ಚಿನ್ನದ ಪದಕವನ್ನು ಪೂವಮ್ಮ ಕೊಡಗು ನೆರೆ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.
ಮಂಗಳೂರಿನ ಪೂವಮ್ಮ ಜಖಾರ್ತಾದಲ್ಲಿದ್ದರೂ ನನ್ನ ಮನಸ್ಸು ಕೊಡಗಿನಲ್ಲೇ ಇದೆ. ಕುಟುಂಬಕ್ಕೆ ಸ್ನೇಹಿತರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ, ತಾನು ಗೆದ್ದಿರುವ ಚಿನ್ನದ ಪದಕವನ್ನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸಿದ್ದಾರೆ.