ಬೈಂದೂರು, ಸೆ 2(SM): ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರಿನ ಕೋಣಮಕ್ಕಿಯಲ್ಲಿ ನಡೆದಿದೆ. ಕೋಣಮಕ್ಕಿ ಸೇತುವೆ ಬಳಿ ಅವಘಡ ಸಂಭವಿಸಿದೆ. ಭಟ್ಕಳ ಮೂಲದ ರಾಜು(28), ಜಮೀರ್(22) ನೀರಿನಲ್ಲಿ ಮುಳುಗಿ ಮೃತಪಟ್ಟವರು.
ಕುಟುಂಬದ ಸದಸ್ಯರ ಜೊತೆ ವಿಹಾರಕ್ಕೆ ಬಂದ ವೇಳೆ ಪಕ್ಕದ ನದಿಯಲ್ಲಿ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭಟ್ಕಳ ಮೂಲದವರಾದ ರಾಜು, ನದಿಯಲ್ಲಿ ಈಜುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಮುಳುಗಲಾರಂಬಿಸಿದರು. ಅವರನ್ನು ಕಾಪಾಡಲು ಹೋದ ಜಮೀರ್ ಕೂಡ ಈಜಲಾಗದೆ ನೀರು ಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಭೇಟಿ ನೀಡಿದ್ದಾರೆ. ಬಳಿಕ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂಡಿಗಳು ನಡೆಸಿದ ಶೋಧ ಕಾರ್ಯದಲ್ಲಿ ಮೃತದೇಹಗಳಾನ್ನು ಮೇಲಕ್ಕೆತ್ತಿದ್ದಾರೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.