ಪುತ್ತೂರು, ಸೆ 3 (MSP): ಬಿಗಿ ಭದ್ರತೆಯ ನಡುವೆ ಪುತ್ತೂರು ನಗರಸಭೆಗೆ ಚುನಾವಣೆಯ ಮತ ಎಣಿಕೆ ಕಾರ್ಯ ಕೊನೆಗೊಂಡಿದ್ದು, ಪುತ್ತೂರು ನಗರಸಭೆಯನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಜೊಂಡಿದೆ. ಒಟ್ಟು 31 ವಾರ್ಡ್ಗಳ ಪೈಕಿ ಬಿಜೆಪಿ 25ರಲ್ಲಿ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ಹೀನಾಯ ಸೋಲು ಕಂಡಿದೆ. ಎಸ್ಡಿಪಿಐ ಒಂದು ವಾರ್ಡ್ನಲ್ಲಿ ಗೆಲುವು ಸಾಧಿಸಿದೆ.